ನಾವು ಕೊಟ್ಟಂತ ಮಾತುಗಳನ್ನ ಉಳಿಸುಕೊಳ್ಳುತ್ತೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ಅವರ ನಿವಾಸದಲ್ಲಿ ಅನ್ನಭಾಗ್ಯ ಯೋಜನೆ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತೀಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ , ಆಪ್ಷನ್ ನೋಡ್ತಿದ್ದೇವೆ. ಅಕ್ಕಿಯನ್ನ ಬೇರೆ ರಾಜ್ಯದಿಂದ ತರುವ ಬಗ್ಗೆ ಮಾತುಕತೆ ನಡೆದಿದೆ. ನಿಮ್ಮ ಪಕ್ಷಕ್ಕಿಂತ ನಮ್ಮ ಪಕ್ಷ ವಿಭಿನ್ನವಾಗಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ತೇವೆ. ಸಿಎಂ, ಸಚಿವರು ದೆಹಲಿಗೆ ಹೋಗಿ ಯಾರನ್ನ ಭೇಟಿರಾಗಿದ್ದಾರೆ ಏನು ಮಾಡಿದ್ದಾರೋ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ಹೋಗುವ ಟೈಮ್ ಬರುತ್ತದೆ ಹೋಗುತ್ತೇನೆ ಇನ್ನೂ ಶೋಭಾ ಕರಂದ್ಲಾಜೆ ಮೆದುಳು ಇರಲಿಲ್ವಾ ಎಂದು ಮಾತನಾಡಿದ್ದಾರೆ.
ಅವರು ಉದ್ಯೋಗ ಸೃಷ್ಟಿ ಮಾಡ್ತೀನಿ, 15 ಲಕ್ಷ ಕೊಡ್ತೀನಿ, ಕಪ್ಪು ಹಣ ತರ್ತೀನಿ ಎಂದು ಮಾತಾಡಿದ್ರು ಏಕೆ ಮಾತಾಡಿದ್ರು?. 5 ವರ್ಷದಲ್ಲಿ ಅವರ ಪ್ರಣಾಳಿಕೆ ಪೂರ್ಣ ಮಾಡಲಿಲ್ಲ ನಾವು ಮಾಡ್ತೀದ್ದೇವೆ.ನಮಗೆ ಬಡವರ ಬಗ್ಗೆ ಕಾಳಜಿ ಇದೆ. ಪ್ರಧಾನಿ ತಮ್ಮ ಬಳಿ ಅಲ್ಲದಿದ್ರೂ, ವಿದೇಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ ನೀವು ಖುಷಿ ಪಡಿ ಎಂದರು. ಇನ್ನೂ ಕಾಂಗ್ರೆಸ್ ನಾಯಕರಿಗೆ ಜ್ಞಾನ ಇರಲಿಲ್ವಾ ಎಂದು ಹೆಚ್ ಡಿಕೆ ಹೇಳಕೆ ವಿಚಾರವಾಗಿ ಮಾತನಾಡಿ ನಮಗೆ ಖಂಡಿತ ಜ್ಞಾನ ಇರಲಿಲ್ಲ.ಕುಮಾರಣ್ಣಗೆ ಜ್ಞಾನ ಇತ್ತಲ್ಲಾ ಸಾಕು ಎಂದು ವಿಪಕ್ಷನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ