ಮಂಗಳೂರು : ಕಾಂಗ್ರೆಸ್ ಕಾಲದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಪ್ರಾರಂಭದ ಲಕ್ಷಣ ನೋಡಿದರೆ ಅವರು ಯಾರ ಮಾತು ಕೇಳೋ ಹಾಗಿಲ್ಲ. ಅವರು ಮಾಡಿದ್ದೇ ಮೊದಲು ಅನ್ನೋ ಧೋರಣೆಯಲ್ಲಿ ಇದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರಂಭ ಆಗಿದೆ. ಆದರೆ ಯಾಕಾದ್ರೂ ಈ ಸರ್ಕಾರ ಬಂತೋ ಅನ್ನೋ ಹಾಗಾಗಿದೆ. ಸರ್ಕಾರ ವೈಫಲ್ಯ ಮುಚ್ಚಿ ಹಾಕಿ ಗೊಂದಲ ಸೃಷ್ಟಿಸುವ ಕೆಲಸದಲ್ಲಿದೆ. ಅಭಿವೃದ್ಧಿ ಬಿಟ್ಟು ಕೇವಲ ಗ್ಯಾರಂಟಿ ಗೊಂದಲದಲ್ಲಿದೆ ಎಂದು ದೂರಿದರು.
ಇನ್ನು ಚುನಾವಣೆ ಪೂರ್ವ ಗ್ಯಾರಂಟಿ ಅದೇ ರೀತಿ ಜಾರಿಗೆ ತನ್ನಿ. ಸರ್ವರ್ ಡೌನ್ ಆದ್ರೆ ಕೇಂದ್ರ ಹ್ಯಾಕ್ ಮಾಡಿದೆ ಅನ್ನೋ ಕೀಳು ಮಟ್ಟಕ್ಕೆ ಹೋಗ್ತಾರೆ. ಒಬ್ಬ ಮಂತ್ರಿಯ ಭೌದ್ದಿಕ ದಿವಾಳಿತನ ಇದು. ಮೊದಲ ಕ್ಯಾಬಿನೆಟ್ ನಲ್ಲಿ ಸರ್ವರ್ ಡೌನ್ ಬಗ್ಗೆ ಗೊತ್ತಿರಲಿಲ್ಬಾ ಎಂದು ಪ್ರಶ್ನಿಸಿದರು. ಹಾಗೇ ಇಷ್ಟೊಂದು ಅರ್ಜಿ ಸಲ್ಲಿಸೋವಾಗ ಸರ್ವರ್ ಬಗ್ಗೆ ನಿಮಗೆ ಗೊತ್ತಿಲ್ವಾ. ಕಾಂಗ್ರೆಸ್ ಕಾಲದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಪ್ರಧಾನಿ ಮೋದಿಯವರ ಅವಧಿಯಲ್ಲಿ ಅಂಥದ್ದು ಆಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ, ದ್ರೋಹ, ಅನ್ಯಾಯವನ್ನ ಮೋದಿ ಸರಿ ಮಾಡ್ತಿದ್ದಾರೆ ಎಂದರು.
ಇದೇ ವೇಳೆ ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ ಕಾಗೇರಿ, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಈಗ ರಾಜಕೀಯ ಮಾಡ್ತಿದೆ. ಶಿಕ್ಷಣದಲ್ಲಿ ಶಿವಾಜಿಯ ಬಗ್ಗೆ ಕಲಿಸಿ ಅಂತ ನಾವು ಹೇಳಿದ್ದೇವು. ಆದರೆ ಇದನ್ನ ಸಿದ್ದರಾಮಯ್ಯರಿಗೆ ತಡೆದುಕೊಳ್ಳಲು ಆಗಲಿಲ್ಲ. ಪರಿಣಾಮ ಅವರು ಎಡಪಂಥೀಯರ ಕೈಗೊಂಬೆಯಾದ್ರು. ಗುಲಾಮಿ ಮಾನಸಿಕತೆ ಹಾಗೂ ಎಡಪಂಥೀಯ ಚಿಂತನೆಗಳನ್ನು ತುಂಬಿಸಿದ್ರು. ಸದ್ಯ ರೋಹಿತ್ ಚಕ್ರತೀರ್ಥ ಪುಸ್ತಕ ಜಾರಿಯಲ್ಲಿ ಇದೆ. ಆದರೆ ಸರ್ಕಾರ ಬಂದ ಕೆಲವೇ ದಿನಗಳಲ್ಲಿ ರಾಜಕೀಯ ಉದ್ದೇಶ ಈಡೇರಿಸಿದ್ದಾರೆ. ದುರಾಡಳಿತದ ಮೂಲಕ ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ಎಡಪಂಥೀಯರನ್ನ ತೃಪ್ತಿಪಡಿಸಲು ಕಾಂಗ್ರೆಸ್ ಇದನ್ನ ಮಾಡಿರೋದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟರು.
ಮಧುಬಂಗಾರಪ್ಪ ಮಂತ್ರಿಯಾಗಿ ಸರಿಯಾಗಿ ತಿಂಗಳಾಗಿಲ್ಲ. ಎಲ್ಲಿ ಯಾವ ಪಠ್ಯ ಇದೆ ಅಂತ ಇನ್ನೂ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಹೇಳಬೇಕು, ಕಿತ್ತು ಹಾಕಿದ ಪಾಠಗಳಲ್ಲಿ ಏನು ದೋಷ ಇದೆ ಅಂತ. ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತಿಯ ಅಮರ ಪುತ್ರರು ಪಠ್ಯ ತೆಗೆದಿದ್ದಾರೆ. ಅವರು ರಾಜ್ ಗುರು, ಭಗತ್ ಸಿಂಗ್, ಸುಖದೇವ್ ಬಗ್ಗೆ ಬರೆದಿದ್ದಾರೆ.
ಈ ಪಾಠದಲ್ಲಿ ತೆಗೆದು ಹಾಕುವ ಒಂದು ಶಬ್ದ ಇಲ್ಲ. ಲೇಖಕರು ಇವರಿಗೆ ಅಪಥ್ಯ ಎಂಬ ಕಾರಣಕ್ಕೆ ತೆಗೆದು ಹಾಕಿದ್ದಾರೆ.
ಲೇಖಕರು ಅಪಥ್ಯ ಅಂತ ಲೇಖನಗಳನ್ನು ತೆಗೆದಿರೋದು ತಪ್ಪು. ಈ ಕ್ಷುಲ್ಲಕ ಪ್ರಯತ್ನವನ್ನ ನಾವು ಖಂಡಿಸಬೇಕಿದೆ ಎಂದು ಹೇಳಿದರು.