ನವದೆಹಲಿ : ಜುಲೈ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India)ಬಿಡುಗಡೆ ಮಾಡಿದೆ.
ಜುಲೈ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿದಂತೆ ಸುಮಾರು 15 ದಿನಗಳು ರಾಷ್ಟ್ರದಾದ್ಯಂತ ಬ್ಯಾಂಕ್ಗಳು ಬಂದ್ ಆಗಲಿದೆ. ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ರಾಜ್ಯ-ನಿರ್ದಿಷ್ಟವಾದ ಹಲವಾರು ಪ್ರಾದೇಶಿಕ ರಜಾದಿನಗಳಲ್ಲಿ ಬ್ಯಾಂಕು ಬಂದ್ ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಜುಲೈ 2023 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಜುಲೈ 4 : ಭಾನುವಾರ
ಜುಲೈ 5 : ಗುರು ಹರಗೋಬಿಂದ್ ಸಿಂಗ್ ಜಯಂತಿ (ಜಮ್ಮು, ಶ್ರೀನಗರ)
ಜುಲೈ 6 : MHIP ದಿನ (ಮಿಜೋರಾಂ)
ಜುಲೈ 8, 2023: 2ನೇ ಶನಿವಾರ
ಜುಲೈ 9 : ಭಾನುವಾರ
ಜುಲೈ 11 : ಕೇರ್ ಪೂಜೆ (ತ್ರಿಪುರ)
ಜುಲೈ 13 : ಭಾನು ಜಯಂತಿ (ಸಿಕ್ಕಿಂ)
ಜುಲೈ 16 : ಭಾನುವಾರ
ಜುಲೈ 17 : ಯು ಟಿರೋಟ್ ಸಿಂಗ್ ಡೇ (ಮೇಘಾಲಯ)
ಜುಲೈ 22 : 4ನೇ ಶನಿವಾರ
ಜುಲೈ 23 : ಭಾನುವಾರ
ಜುಲೈ 29 : ಮೊಹರಂ (ಬಹುತೇಕ ಎಲ್ಲಾ ರಾಜ್ಯಗಳಲ್ಲಿ)
ಜುಲೈ 30 : ಭಾನುವಾರ
ಜುಲೈ 31 : ಹುತಾತ್ಮ ದಿನ (ಹರಿಯಾಣ ಮತ್ತು ಪಂಜಾಬ್)
ಬ್ಯಾಂಕ್ಗಳಿಗೆ ರಜಾ ದಿನಗಳ ಕಾರಣದಿಂದಾಗಿ ಗ್ರಾಹಕರು ಬ್ಯಾಂಕ್ ಸಂಬಂಧಿತ ವಹಿವಾಟುಗಳಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಎಟಿಎಂಗಳು, ನಗದು ಠೇವಣಿಗಳು, ಆನ್ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
ಸ್ಥಳೀಯ ಹಬ್ಬಗಳ ದೃಷ್ಟಿಯಿಂದ ರಜಾದಿನಗಳನ್ನು ನಿಗದಿಪಡಿಸಿದ್ದರಿಂದ ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಆರ್ಬಿಐ ಬ್ಯಾಂಕ್ ರಜಾದಿನಗಳ ವೇಳಾಪಟ್ಟಿಯನ್ನು ಆರ್ಬಿಐ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ವೈಯಕ್ತಿಕ ಬ್ಯಾಂಕುಗಳ ವೆಬ್ಸೈಟ್ಗಳಲ್ಲಿ ನೀವು ಬ್ಯಾಂಕ್ ರಜಾದಿನಗಳ ವೇಳಾಪಟ್ಟಿಯನ್ನುತಿಳಿದು ಕೊಳ್ಳಬಹುದಾಗಿದೆ.