ಗೋರಖ್ಪುರ : ಉತ್ತರಪ್ರದೇಶದ ಗೋರಖ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಜನರು ಮಳೆಯಲ್ಲೂ ಕಾದು ನಿಂತು ಕಣ್ತುಂಬಿಕೊಂಡರು.
ಜನರು ಮಳೆಯಲ್ಲಿ ನಿಂತು ಪ್ರಧಾನಿ ಮೋದಿಯವರ ಬರುವಿಕೆಯನ್ನು ಕಣ್ತುಂಬಿಕೊಂಡ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗೋರಖ್ಪುರದ ಗೀತಾ ಪ್ರೆಸ್ನ ಶತಮಾನೋತ್ಸವ ಸಮಾರಂಭ ಹಾಗೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲು ಬಂದಿದ್ದ ಪ್ರಧಾನಿ ಮೋದಿಯನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾಗ ಮಳೆ ಸುರಿಯಲಾರಂಭಿಸಿತ್ತು. ಅದಾಗ್ಯೂ ಜನರು ಅದನ್ನು ಲೆಕ್ಕಿಸದರೆ ನೆಚ್ಚಿನ ಮೋದಿಯನ್ನು ನೋಡಿ ಪುಳಕಿತರಾದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.