ಹೆಣ್ಣು ಅಂದರೆ ಸೌಂದರ್ಯ…ಸೌಂದರ್ಯ ಅಂದರೆ ಹೆಣ್ಣು. ತಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕೆಂಬ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಇರುತ್ತದೆ. ಹಾಗಾಗಿಯೇ ತಮ್ಮ ಸೌಂದರ್ಯವನ್ನು ಇನ್ನಷ್ಟು ಸುಂದರಗೊಳಿಸಲು ಅನಗತ್ಯ ರಾಸಾಯನಿಕಗಳನ್ನು ಹೊಂದಿರುವ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ.
ಅವು ತಕ್ಷಣದ ಫಲಿತಾಂಶವನ್ನು ತೋರಿಸುವುದಿಲ್ಲವಾದರೂ ಕ್ರಮೇಣ ಒಣ ಚರ್ಮ ಅಥವಾ ಇತರ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ತುಟಿಗಳನ್ನು ಹೆಚ್ಚು ಆಕರ್ಷಕವಾಗಿಸಲು ಲಿಪ್ ಸ್ಟಿಕ್ ಬಳಸುತ್ತಿದ್ದಾರೆ.. ಬಹುತೇಕ ಮಹಿಳೆಯರು ಕೀಳುಮಟ್ಟದ ಲಿಪ್ ಸ್ಟಿಕ್ ಬಳಸುತ್ತಿದ್ದಾರೆ. ಅದರಿಂದ ಭವಿಷ್ಯದಲ್ಲಿ ದೊಡ್ಡ ಅಪಾಯವನ್ನು ಎದುರಿಸಲಿದ್ದಾರೆ. ಲಿಪ್ ಸ್ಟಿಕ್‌ನಿಂದ ತುಟಿಗಳು ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗಳೂ ಬರಬಹುದು ಎನ್ನುತ್ತಾರೆ ತಜ್ಞರು. ಲಿಪ್ಸ್ಟಿಕ್‌ನಲ್ಲಿ ಸೀಸದ ರಾಸಾಯನಿಕವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದು ನರ್ವಸ್ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದಲ್ಲದೇ ಮೆದುಳಿನ ಆರೋಗ್ಯವನ್ನು ಹಾಳುಮಾಡುತ್ತದೆ. ತಜ್ಞರು ಹೇಳುವಂತೆ ಹಾರ್ಮೋನುಗಳ ಅಸಮತೋಲನ ಉಂಟಾಗಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಳದರ್ಜೆಯ ಲಿಪ್ಸ್ಟಿಕ್ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ದುಬಾರಿ ಬೆಲೆಯ ಲಿಪ್ ಸ್ಟಿಕ್ ಗಳಿಗೆ ಹೋಲಿಸಿದರೆ ಮಾಮೂಲಿ ಲಿಪ್ ಸ್ಟಿಕ್ ಗಳಲ್ಲಿ ಅತ್ಯಂತ ಅಪಾಯಕಾರಿ ಕೆಮಿಕಲ್‌ಗಳಿವೆ ಎನ್ನಲಾಗುತ್ತಿದೆ. ಬೆಲೆ ಬಾಳುವ ಲಿಪ್ ಸ್ಟಿಕ್‌ಗಳಿಂದಲೂ ಹಲವು ರೀತಿಯ ಕ್ಯಾನ್ಸರ್ ಗಳು ಬರುತ್ತವೆ.