ಟಾಲಿವುಡ್ನ ಸ್ಟಾರ್ ಹೀರೋ ಥಳಪತಿ ವಿಜಯ್ 65ನೇ ಚಿತ್ರ ಇದೀಗ ಕಾಲಿವುಡ್ನಲ್ಲಿ ಭಾರಿ ಚರ್ಚೆಯಲ್ಲಿರೋ ಸುದ್ದಿ. ಅದ್ರಲ್ಲೂ ವಿಜಯ್ ಜೊತೆ ತೆರೆ ಹಂಚಿಕೊಳ್ಳೋಕೆ ನಾ ಮುಂದು ತಾಮುಂದು ಅಂತಾ ನಾಯಕಿಯರು ಸರದಿಯಲ್ಲಿ ನಿಂತಿರ್ತಾರೆ. ಈ ಪೈಕಿ ಚಿತ್ರತಂಡ ಕನ್ನಡದ ಹುಡುಗಿಯ ಜೊತೆ ಮಾತು ಕಥೆ ನಡೆಸಿದೆ.
ಮಾಸ್ಟರ್ ಚಿತ್ರದ ಸಕ್ಸ್ಸ್ ನಂತ್ರ ಥಳಪತಿ ವಿಜಯ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆ ಪೈಕಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿರೋ ಚಿತ್ರ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ಗೆ, ನೆಲ್ಸನ್ ದಿಲೀಪ್ ಕುಮಾರ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿರೋ ಚಿತ್ರದಲ್ಲಿ ವಿಜಯ್ಗೆ ಜೊತೆಯಾಗಿ ಇಬ್ಬರೂ ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಟಾಲಿವುಡ್ನ ಬೆಡಗಿ ಪೂಜಾ ಹಗ್ಡೆ ಮೊದಲ ನಾಯಕಿಯಾಗಿ ಆಯ್ಕೆಯಾಗೋ ಮೂಲಕ ಕಾಲಿವುಡ್ನ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದಾರೆ.
ಇನ್ನೊಬ್ಬ ನಟಿಗಾಗಿ ಚಿತ್ರತಂಡ ಹುಡುಕಾಟದಲ್ಲಿದ್ದಾಗ ತಂಡಕ್ಕೆ ಹೊಳೆದಿದ್ದು ಈಗಾಗ್ಲೇ ಸ್ಯಾಂಡಲ್ವುಡ್ನಿಂದ ಟಾಲಿವುಡ್ಗೆ ಹೋಗಿ ಅಲ್ಲಿಂದ ಬಾಲಿವುಡ್ ವರೆಗೂ ತಮ್ಮ ಅಬಿಮಾನಿಗಳನ್ನ ಹೊಂದಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಒಂದು ಹಂತಕ್ಕೆ ಚಿತ್ರದ ಪಾತ್ರಕ್ಕೆ ಈ ನಟಿಯಾದರೇನೆ ಸೂಕ್ತವಾಗುತ್ತೆ ಎಂದುಕೊಂಡಿರೋ ಚಿತ್ರತಂಡ, ಬಹುತೇಖ ರಶ್ಮಿಕಾ ಮಂದಣ್ಣ ಅವರನ್ನೇ ಚೂಸ್ ಮಾಡುವಂತೆ ಕಾಣಸ್ತಿದೆ. ಈಗಾಗ್ಲೇ ಕಾರ್ತಿಕ ಜೊತೆಯಲ್ಲಿ ತಮಿಳಿನಲ್ಲಿ ಕಾಣಿಸಿಕೊಂಡಿದ್ದಾರೆ ರಶ್ಮಿಕಾ. ಹಾಗಾಗಿ ಮಾತುಕಥೆಯ ಹಂತಕ್ಕೆ ಸಿದ್ದವಾಗಿದೆ ವಿಜಯ್ ಮತ್ತು ತಂಡ.
ಕನ್ನಡ ಸೇರಿದಂತೆ ಟಾಲಿವುಡ್ನಲ್ಲಿಯೂ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾಗೆ ಇದೀಗ ಕಾಲಿವುಡ್ನಲ್ಲಿಯೂ ಬೇಡಿಕೆಗಳು ಹೆಚ್ಚಾಗ್ತಿದೆ. ಅಷ್ಟೇ ಅಲ್ದೇ ಬಾಲಿವುಡ್ನಲ್ಲಿಯೂ ಸಿದ್ದಾರ್ಥ ಮಲ್ಹೋತ್ರ ಜೊತೆಗೂ ಸಿನಿಮಾ ಮಾಡೋ ಮೂಲಕ ದೊಡ್ಡ ಸುದ್ದಿಯಲ್ಲಿರೋ ನಟಿಗೆ, ಇದೀಗ ಕಾಲಿವುಡ್ನಲ್ಲೂ ಸಾಲು ಸಾಲು ಸಿನಿಮಾಗಳು ಬರ್ತಿರೋದು ನೋಡಿದ್ರೆ ನಮ್ಮ ಕನ್ನಡದ ಹುಡುಗಿಗೆ ಎಲ್ಲಾ ಕಡೆಯಲ್ಲೂ ದೊಡ್ಡ ಡಿಮ್ಯಾಂಡ್ ಇದೆ ಎಂಬುದೇ ಹೆಮ್ಮೆಯ ವಿಷಯ.