ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಅನುದಾನ ಬಿಡುಗಡೆ ಮಾಡಿದೆ. ಮಾಜಿ ಸಚಿವ ಎಸ್.ಟಿ .ಸೋಮಶೇಖರ್ ಕ್ಷೇತ್ರವಾದ ಯಶವಂತಪುರ ಕ್ಷೇತ್ರಕ್ಕೆ 7 ಕೋಟಿ 63 ಲಕ್ಷ ಹಣ ಅನುದಾನ ಮಂಜೂರು ಮಾಡಲಾಗಿದೆ.
ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗೆ ಅನುದಾನ 1ಕೋಟಿ 63 ಲಕ್ಷ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲು.ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ.ಮೇಂಟೆನೆನ್ಸ್ ಮಾಡಲು 2 ಕೋಟಿ ಅನುದಾನ ಮೀಸಲು ಈ ರೀತಿ ಅನುದಾನ ಬಿಡುಗಡೆ ಆಗಿದ್ದು ಒಟ್ಟು 7.63 ಕೋಟಿ ಅನುದಾನದ ಪೈಕಿ ಹಣ ಹಂಚಿಕೆ ಆಗಿದೆ.
ಮೊನ್ನೆ ತಾನೆ ಸಿಎಂ ಸಿದ್ದರಾಮಯ್ಯ ಅವರನ್ನ ಅನುದಾನಕ್ಕಾಗಿ ಎಸ್ ಟಿ ಸೋಮಶೇಖರ್ ಭೇಟಿ ಮಾಡಿದ್ರು ಮನವಿ ಸಲ್ಲಿಸಿದ್ರು.ಸುಮಾರು ಒಂದು ಗಂಟೆಗಳಕಾಲ ಚರ್ಚೆ ನಡೆಸಿದ್ರು.ಈ ಚರ್ಚೆ ಹಾಗೂ ಬಂಪರ್ ಅನುದಾನ ರಾಜಕೀಯದಲ್ಲಿ ಕೂತುಹಲ ಮೂಡಿಸಿದೆ.ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಮರಳುತ್ತಾರೆ.
ಬಿಜೆಪಿ ಪಕ್ಷ ಬಿಟ್ಟು ಸದ್ಯದಲ್ಲಿಯೇ ಕಾಂಗ್ರೆಸ್ ಹೋಗುವ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ.ಅದರ ಮೊದಲ ಭಾಗವಾಗಿ ಎಸ್ ಟಿ ಸೋಮಶೇಖರ್ ಅವರ ಆಪ್ತರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.ಈವೇಲ್ಲ ಬೆಳವಣಿಗೆ ನಡುವೆ ಸಿಎಂ ಸಿದ್ದರಾಮಯ್ಯ ಎಸ್ ಟಿ ಸೋಮಶೇಖರ್ ಅವರ ಕ್ಷೇತ್ರ ವಿಷೇಶ ಅನುದಾನ ಬಿಡುಗಡೆ ಆಗಿದ್ದು ಸೋಮಶೇಖರ್ ಅವರ ಕಾಂಗ್ರೆಸ್ ನತ್ತ ವಾಲುವ ಎಲ್ಲಾ ಸಾಧ್ಯತೆಗಳ ಚರ್ಚೆಗೆ ಪುಷ್ಠಿ ನೀಡಿದೆ.
ವರದಿ : ಬಸವರಾಜ ಹೂಗಾರ