ನವದೆಹಲಿ: ಡ್ರಗ್ಸ್ ಪ್ರಕರಣ ಸಂಬಂಧ ಬಾಲಿವುಡ್ ನಟ ಅಜಾಜ್ ಖಾನ್ ರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದೆ. ಮಾದಕ ದ್ರವ್ಯ ಪ್ರಕರಣಕ್ಕೂ ನಂಟು ಹೊಂದಿರುವ ಆರೋಪದಲ್ಲಿ 8 ಗಂಟೆಗಳ ವಿಚಾರಣೆ ಬಳಿಕ ಎನ್ ಸಿಬಿ ಅಧಿಕಾರಿಗಳು ಅಜಾಜ್ ಖಾನ್ ನನ್ನು ಬಂಧಿಸಿದೆ.
ಅಜಾಜ್ ಖಾನ್ ಬಟಾಟ ಗ್ಯಾಂಗಿನ ಸದಸ್ಯಎಂದು ಆರೋಪಿಸಲಾಗುತ್ತಿದೆ. ಫಾರೂಕ್ ಬಟಾಟಾ ಅವರ ಪುತ್ರ ಶದಾಬ್ ಬಟಾತಾ ಅವರನ್ನು ಈ ಹಿಂದೆ ಎನ್ ಸಿಬಿ ಬಂಧಿಸಿ2 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಗಳನ್ನು ಸರಬರಾಜು ಮಾಡಿದ ಆರೋಪ ಶದಾಬ್ ಬಟಾಟ ಮೇಲಿದೆ.
ಅಜಾಜ್ ಖಾನ್ ಹಲವಾರು ಹಿಂದಿ ಮತ್ತು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಬಿಗ್ ಬಾಸ್ 7 ಸೀಸನ್ ನಲ್ಲಿ ಪಾಲ್ಗೊಂಡಿದ್ದರು.