ಕೊಡಗು: ಪಾನಮತ್ತ ವ್ಯಕ್ತಿಯೊಬ್ಬ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಮನೆಯಲ್ಲಿದ್ದಂತ ಒಂದೇ ಕುಟುಂಬದ 6 ಜನರು ಸಜೀವವಾಗಿ ದಹನವಾಗಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ.
ಕಾನೂರು ಗ್ರಾಮದಲ್ಲಿ ಎರವರ ಬೋಜ ಎಂಬ ಪಾನ ಮತ್ತ ವ್ಯಕ್ತಿ, ಎರವರ ಮಂಜ ಎಂಬುವರ ಮನೆಗೆ ಎಲ್ಲರೂ ಮಲಗಿದ ಸಂದರ್ಭದಲ್ಲಿ ಬೆಂಕಿ ಹಚ್ಚಿದ್ದಾನೆ. ಅಲ್ಲದೇ ಮನೆಯ ಬಾಗಿಲಿಗೆ ಕುಟುಂಬದವರು ಯಾರೂ ಹೊರ ಬರದಂತೆ ಬಾಗಿಲಿಗೆ ಬೀಗ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಲಾಗದೇ, ಮನೆಯಲ್ಲಿದ್ದ ಬೇಬಿ, ಸೀತೆ, ಪ್ರಾರ್ಥನ, ವಿಶ್ವಾಸ್, ಪ್ರಕಾಶ್ ಹಾಗೂ ಪಾಚೆ ಎಂಬುವರು ಸಜೀವವಾಗಿ ದಹನ ಗೊಂಡಿದ್ದಾರೆ.
ಮನೆಗೆ ಎರವರ ಬೋಜ ಎಂಬ ಪಾನಮತ್ತ ಬೆಂಕಿ ಹಚ್ಚಿದಂತ ಸಂದರ್ಭದಲ್ಲಿ 8 ಜನರು ಮನೆಯಲ್ಲಿದ್ದರು ಎನ್ನಲಾಗಿದೆ. ಇವರದಲ್ಲಿ ಮೂವರು ಸಜೀವವಾಗಿ ದಹನವಾಗಿದ್ದರೇ, ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇನ್ನೂ ಭಾಗ್ಯ ಎನ್ನುವವರು ಗಂಭೀರ ಸ್ಥಿತಿಯನ್ನು ತಲುವಿದ್ದಾರೆ. ಘಟನೆ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.