FoodHealthHomeLife Style

ದೇಹದ ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯಿರಿ..!

ಹೆಲ್ತ್‌ ಟಿಪ್ಸ್‌ : ಕ್ಯಾರೆಟ್ ಅನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು, ಸಾರು, ಸಾಂಬಾರ್ ಗಳಲ್ಲಿನ ತರಕಾರಿಯಾಗಿ ಬಳಸಬಹುದು, ಚಾಟ್ ಮಸಾಲಾ ಚಿಮುಕಿಸಿ ತಿನ್ನಬಹುದು ಅಥವಾ ಚಿಕ್ಕದಾಗಿ ತುರಿದು ಹಿಂಡಿ ರಸ ಸಂಗ್ರಹಿಸಿ ರಸವನ್ನೂ ಕುಡಿಯಬಹುದು. ಯಾವುದೇ ವಿಧಾನದಲ್ಲಿ ಸೇವಿಸಿದರೂ ಪ್ರಯೋಜನ ದೊರಕುವುದಂತೂ ಖಚಿತ. ಆದರೆ ಹಸಿಯಾಗಿ ತಿಂದಾಗಲೇ ಇದರ ಗರಿಷ್ಟ ಪ್ರಯೋಜನ ಸಿಗುತ್ತದೆ.

ಅದರಲ್ಲೂ ಇದರ ರಸವನ್ನು ಸೇವಿಸಿದಾಗ ಸಾಂದ್ರೀಕೃತ ಪ್ರಮಾಣದಲ್ಲಿ ಪೋಷಕಾಂಶಗಳು ದೊರಕುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ದಿನಕ್ಕೊಂದು ಲೋಟ ಕ್ಯಾರೆಟ್ ಜ್ಯೂಸ್ ಸೇವಿಸುವ ಮೂಲಕ ಪಡೆಯಬಹುದಾದ ಏಳು ಪ್ರಮುಖ ಪ್ರಯೋಜನಗಳನ್ನು ನೋಡೋಣ.

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕ್ಯಾರೆಟ್ ರಸದ ಅಥವಾ ಹಸಿಯಾಗಿದ್ದಂತೆ ಸೇವಿಸುವ ಪ್ರಮುಖ ಪ್ರಯೋಜನವೆಂದರೆ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದು ಹಾಗೂ ಜೀರ್ಣಕ್ರಿಯೆ ಸುಲಭವಾಗುವುದು. ನಿಮ್ಮ ನಿತ್ಯದ ಸೇವನೆಯ ಬುರುಗು ಪಾನೀಯ ಗಳನ್ನು ಸಂಪೂರ್ಣವಾಗಿ ತ್ಯಜಿಸಿ ಇದರ ಸ್ಥಾನದಲ್ಲಿ ಕ್ಯಾರೆಟ್ ರಸವನ್ನು ಸೇವಿಸ ತೊಡಗಿದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ದಾರ್ಢ್ಯ ಹೆಚ್ಚುವುದನ್ನು ಹಾಗೂ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡಿರುವುದನ್ನು ಗಮನಿಸಬಹುದು. ಕ್ಯಾರೆಟ್ ನಲ್ಲಿರುವ ಪೋಷಕಾಂಶಗಳು ಆಹಾರವನ್ನು ಸುಲಭವಾಗಿ ಒಡೆಯಲು ನೆರವಾಗುವ ಹಾಗೂ ಇದಕ್ಕಾಗಿ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕವನ್ನು ಇಳಿಸಲು ನೆರವಾಗುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಬೀಟಾ ಕ್ಯಾರೋಟೀನ್ ಕೇವಲ ಕಣ್ಣಿನ ದೃಷ್ಟಿಗೆ ಮಾತ್ರವಲ್ಲ, ಮೆದುಳಿನ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತದೆ. ವಯಸ್ಸಾದಂತೆ ಎದುರಾಗುವ ಸ್ಮರಣ ಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳು ಎದುರಾಗುವ ಸಾಧ್ಯತೆಯನ್ನು ಕ್ಯಾರೆಟ್ ಸೇವನೆಯಿಂದ ತಗ್ಗಿಸಬಹುದು. ಮೆದುಳಿಗೆ ಎದುರಾಗುವ ಉತ್ಕರ್ಷಣಶೀಲ ಒತ್ತಡ (oxidative stress) ದಿಂದ ಮೆದುಳಿನ ಜೀವಕೋಶಗಳು ಒಮ್ಮೆ ಸತ್ತರೆ ಇವು ಮತ್ತೊಮ್ಮೆ ಹುಟ್ಟದೇ ಇರುವುದು ಇದಕ್ಕೆಲ್ಲಾ ಕಾರಣ. ಬೀಟಾ ಕ್ಯಾರೋಟೀನ್ ಈ ಒತ್ತಡವನ್ನು ನಿವಾರಿಸಿ ಅಥವಾ ಆದಷ್ಟೂ ತಗ್ಗಿಸಿ ಮೆದುಳಿನ ಮೇಲೆ ಧಾಳಿ ಎರಗದಂತೆ ತಡೆಯುವ ಮೂಲಕ ಮೆದುಳಿನ ಸವೆತವನ್ನು ತಡೆಯುತ್ತದೆ.

​ತ್ವಚೆಯ ತೊಂದರೆಗಳನ್ನು ಸರಿಪಡಿಸುತ್ತದೆ

ಕ್ಯಾರೆಟ್ ಸೇವನೆಯಿಂದ ಸ್ಪಷ್ಟವಾಗಿ ದೊರಕಬಲ್ಲ ಇನ್ನೊಂದು ಪ್ರಯೋಜನವೆಂದರೆ ತ್ವಚೆ ಉತ್ತಮಗೊಳ್ಳುವುದು. ಕ್ಯಾರೆಟ್ ರಸದ ನಿತ್ಯದ ಸೇವನೆಯಿಂದ ತ್ವಚೆಯ ತೊಂದರೆಗಳು ಶೀಘ್ರವೇ ಸರಿಹೋಗುತ್ತವೆ. ಚರ್ಮದಲ್ಲಿ ಎದುರಾಗಿರುವ ಕೆಂಪು ಗೆರೆಗಳು, ಉರಿ, ಸೋರಿಯಾಸಿಸ್, ಎಕ್ಸಿಮಾ ಮೊದಲಾದ ಕಾಯಿಲೆಗಳು ಕ್ಯಾರೆಟ್ ಸೇವನೆಯಿಂದ ಶೀಘ್ರವೇ ಗುಣವಾಗುತ್ತವೆ. ತ್ವಚೆಯ ಆರೋಗ್ಯಕ್ಕೆ ವಿಟಮಿನ್ ಇ ನಂತೆಯೇ ವಿಟಮಿನ್ ಎ ಸಹಾ ಅಗತ್ಯವಾಗಿದೆ.

ಇದು ತ್ವಚೆಯ ಹೊರಪದರದ ಬಣ್ಣ ಮತ್ತು ನುಣುಪುತನವನ್ನು ಕಾಪಾಡುತ್ತದೆ. ಕ್ಯಾರೆಟ್ ತಿನ್ನುವ ಮೂಲಕ ತ್ವಚೆಗೆ ಉತ್ತಮ ಆರೈಕೆಯನ್ನು ಒದಗಿಸುವ ಜೊತೆಗೇ ಹೊರಗಿನಿಂದಲೂ ಕ್ಯಾರೆಟ್ ತ್ವಚೆಗೆ ಇನ್ನಷ್ಟು ಹೆಚ್ಚಿನ ಆರೈಕೆ ನೀಡುತ್ತದೆ. ಕಾರಣಾಂತರಗಳಿಂದ ಸಹಜವರ್ಣ ಕುಂದಿದ್ದರೆ ಕ್ಯಾರೆಟ್ ಅನ್ನು ನಯವಾಗಿ ಅರೆದು ನೇರವಾಗಿ ಈಗ ತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ ಕೊಂಚ ಹೊತ್ತು ಕಳೆದು ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಶೀಘ್ರವೇ ಸಹಜವರ್ಣ ಮತ್ತು ಕಾಂತಿಯನ್ನು ಪಡೆಯಬಹುದು.

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕ್ಯಾನ್ಸರ್ ಬರದಂತೆ ತಡೆಯಲು ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಇರಲೇ ಬೇಕು. ಕ್ಯಾನ್ಸರ್ ಎಂದರೆ ಯಾವುದೋ ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚಾಗಿ ಅನಿಯಂತ್ರಿತವಾಗಿ ಬೆಳವಣಿಗೆ ಹೊಂದುವುದೇ ಆಗಿದೆ. ಯಾವ ಅಂಗದ ಜೀವಕೋಶಗಳು ಹೀಗೆ ಬೆಳೆಯುತ್ತವೋ ಆ ಅಂಗದ ಹೆಸರಿಗೇ ಕ್ಯಾನ್ಸರ್ ಎಂಬ ಪದವನ್ನು ಸೇರಿಸಲಾಗುತ್ತದೆ. ಆಂಟಿ ಆಕ್ಸಿಡೆಂಟುಗಳು ಈ ಜೀವಕೋಶಗಳು ಅನಿಯಂತ್ರಿತವಾಗಿ ಅಭಿವೃದ್ದಿ ಪಡೆಯುವುದನ್ನು ತಡೆಯುವ ಮೂಲಕ ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ.

ಸಂಶೋಧನೆಗಳ ಮೂಲಕ ಕ್ಯಾರೆಟ್ ಸೇವನೆಯಿಂದ ಬಾಯಿ, ಗಂಟಲಕುಳಿ, ಮೂಗಿನ ಹಿಂಭಾಗದ ಭಾಗವಾದ ನ್ಯಾಸೋ ಫ್ಯಾರಿಂಕ್ಸ್, , ಧ್ವನಿಪೆಟ್ಟಿಗೆ, ಅನ್ನನಾಳ, ಶ್ವಾಸಕೋಶ, ಹೊಟ್ಟೆ ಮತ್ತು ದೊಡ್ಡ ಕರುಳು ಮತ್ತು ಗುದನಾಳ (colorectal) ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ. ಇತ್ತೀಚೆಗ ಬಂದ ವರದಿಗಳ ಪ್ರಕಾರ, ರಕ್ತಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೂ ಕ್ಯಾರೆಟ್ ಉತ್ತಮವಾಗಿದ್ದು ಇದರಲ್ಲಿರುವ ಬಯೋ ಆಕ್ಟಿವ್ ರಾಸಾಯನಿಕಗಳು ಈ ಕ್ಯಾನ್ಸರ್ ಗುಣಪಡಿಸಲು ನೆರವಾಗುತ್ತವೆ.

​ಗರ್ಭಿಣಿಯರಿಗೂ ಒಳ್ಳೆಯದು

ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೊರತಾಗಿ ಇತರ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ಫೋಲೇಟ್ ಗಳು ಪ್ರಮುಖವಾಗಿದ್ದು ಇವೆಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ಪೂರಕವಾಗಿವೆ. ಅದರಲ್ಲೂ ವಿಟಮಿನ್ ಎ ಮತ್ತು ವಿಟಮಿನ್ ಸಿ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗುವಿಗೆ ಫ್ರೀ ರ್‍ಯಾಡಿಕಲ್ ಎಂಬ ಹಾನಿಕಾರಕ ಕಣಗಳು ಎದುರಾಗದಂತೆ ತಡೆಯುತ್ತವೆ. ಅಷ್ಟೇ ಅಲ್ಲ, ನಿಯಮಿತ ಕ್ಯಾರೆಟ್ ಸೇವನೆಯಿಂದ ಮಗುವಿನ ಆರೋಗ್ಯವೂ ಚೆನ್ನಾಗಿ ಇರುವ ಜೊತೆಗೇ ಬೆಳವಣಿಗೆಯೂ ಉತ್ತಮವಾಗಿದ್ದು ಜನ್ಮತಃ ಬರುವ ವಿಕಲತೆಗಳಿಂದ ರಕ್ಷಿಸುತ್ತದೆ.

ಸಲಹೆ

ಕ್ಯಾರೆಟ್ ಸಿಪ್ಪೆ ಸಹಿತ ತಿನ್ನುವುದು ಆರೋಗ್ಯಕರವಾದರೂ ಇದನ್ನು ಮರಳಿನಲ್ಲಿ ಬೆಳೆಸಿರುವ ಕಾರಣ ಸಿಪ್ಪೆಯಲ್ಲಿ ಸೂಕ್ಷ್ಮವಾದ ಮರಳಿನ ಕಣಗಳು ಇದ್ದೇ ಇರುತ್ತವೆ. ಈ ಕಣಗಳು ವಾಸ್ತವದಲ್ಲಿ ಸೂಕ್ಷ್ಮವಾದ ಗಾಜಿನ ಚೂರುಗಳಾಗಿವೆ. ನಮ್ಮ ಜಠರ ಗಾಜನ್ನು ಜೀರ್ಣಿಸಿಕೊಳ್ಳಲಾರವು. ಹಾಗಾಗಿ ಈ ಗಾಜಿನ ಚೂರುಗಳು ನೇರವಾಗಿ ಕರುಳು ಬಾಲ ಅಥವಾ ಅಪೆಂಡಿಕ್ಸ್ ನಲ್ಲಿ ಸಂಗ್ರಹಗೊಳ್ಳುತ್ತವೆ. ನಿಧಾನವಾಗಿ ತುಂಬುಕೊಳ್ಳುತ್ತಾ ಒಮ್ಮೆ ಇದು ತುಂಬಿಕೊಂಡು ಭಾರೀ ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಚೆನ್ನಾಗಿ ತೊಳೆದುಕೊಂಡರೂ ಸರಿ, ಸಿಪ್ಪೆ ನಿವಾರಿಸಿಯೇ ತಿನ್ನಿ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!