ಗಿಸ್ಬೋರ್ನ್: ನ್ಯೂಜಿಲ್ಯಾಂಡ್ನಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಗಿಸ್ಬೋನ್ ನಗರದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಆದರೆ ಈ ಭೂಕಂಪನದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ನ್ಯೂಜಿಲ್ಯಾಂಡ್ನಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದವು. ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ 9 ಕಿ.ಮೀ ದೂರ ಹಾಗೂ 181 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿತ್ತು. ಕಳೆದೊಂದು ವಾರದಿಂದ ದೇಶದಲ್ಲಿ ಒಟ್ಟು ಮೂರು ಬಾರಿ ಭೂಮಿ ಕಂಪಿಸಿದೆ. ಗುರುವಾರ 7.3 ಹಾಗೂ 8.1 ತೀವ್ರತೆಯ ಭೂಕಂಪಕ್ಕೆ ನ್ಯೂಜಿಲ್ಯಾಂಡ್ ಸಾಕ್ಷಿಯಾಗಿತ್ತು.
ಈ ಮೂರೂ ಸಂದರ್ಭಗಳಲ್ಲೂ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿರಲಿಲ್ಲ. 2011ರಲ್ಲಿ ನ್ಯೂಜಿಲೆಂಡ್ನ ಕ್ರಿಸ್ಟ್ಚರ್ಚ್ ನಗರದಲ್ಲಿ ಉಂಟಾಗಿದ್ದ 6.3 ತೀವ್ರತೆಯ ಭೂಕಂಪದಿಂದಾಗಿ ಸುಮಾರು 185 ಮಂದಿ ಮೃತಪಟ್ಟಿದ್ದರು.