ಹೈದರಾಬಾದ್ : ಹೈದರಾಬಾದ್ನ ಉಪ್ಪಾಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 3 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಅಭ್ಯಾಸ ಪಂದ್ಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪಂದ್ಯ ನೋಡದಕ್ಕೆ ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಕಾದಿತ್ತು ಅಷ್ಟಕ್ಕೂ ಆ ಸ್ಟೇಡಿಯಂನಲ್ಲಿ ಏನಾಯ್ತು ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ..
ಅಕ್ಟೋಬರ್ 3 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಅಭ್ಯಾಸ ಪಂದ್ಯ ಹೈದರಾಬಾದ್ನ ನಡೆಯುವುದಕ್ಕೆ ಎಲ್ಲಾ ತಯಾರಿ ನಡೆದಿತ್ತು.
ಈ ಅದ್ಬುತ ಪಂದ್ಯ ವೀಕ್ಷಣೆಗಾಗಿ ನೂರಾರು ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದರು. ಆದ್ರೆ ಅಲ್ಲಿ ಪಂದ್ಯ ವೀಕ್ಷಣೆಗಾಗಿ ಬಂದ ಅಭಿಮಾನಿಗಳು ಕುಳಿತುಕೊಳ್ಳದೇ ಮುಂದೆ ಸಾಗಿದ್ದಾರೆ ಅಲ್ಲೇ ಇದ್ದ ಸಿಬ್ಬಂದಿಗಳು ಕುಳಿತು ಕೊಳ್ಳೋದಕ್ಕೆ ಇಟ್ಟ ಕುರ್ಚಿಗಳನ್ನು ಗಮನಿಸಿದಾಗ ಅದರಲ್ಲಿ ಹಕ್ಕಿಗಳು ಗಲೀಜು (ಅನೈರ್ಮಲ್ಯ) ಮಾಡಿತ್ತು ಇದನ್ನು ಕಂಡ ಬಂದವರು ಮೂಗು ಮುಚ್ಚಿಕೊಂಡು ಮುಂದೆ ಸಾಗಿದ್ದಾರೆ .
ಅಲ್ಲದೇ ಒಂದಷ್ಟು ಜನರು ಇಡೀ ಪಂದ್ಯವನ್ನು ನಿಂತು ವೀಕ್ಷಿಸಿದರು ಅಲ್ಲದೇ ಈ ಪಂದ್ಯಕ್ಕಾಗಿ ಬಿಸಿಸಿಐ, ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಸರಿಯಾದ ಕ್ರಮಕೈಗೊಂಡಿಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ ಪಟ್ಟಿದಲ್ಲದೇ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪಂದ್ಯದಲ್ಲೂ ಆತಿಥ್ಯವಹಿಸುತ್ತಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದೆ ಎಂದು ವರದಿಯಾಗಿದೆ.