ನಾಳೆಯಿಂದ ರಾಜ್ಯ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ನೌಕರರ ರಜೆ ರದ್ದುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವಾರದ ರಜೆ ಮತ್ತು ತುರ್ತು ರಜೆ ಹೊರತುಪಡಿಸಿ ಎಲ್ಲಾ ನೌಕರರು ರಜೆ ರದ್ದುಗೊಳಿಸಿರುವ ಸರಕಾರ, ಅನಗತ್ಯ ರಜೆ ಹಾಕಿದರೆ ವೇತನ ಕಡಿತ ಮಾಡುವುದಾಗಿ ಎಚ್ಚರಿಸಿದೆ.
ನಾಳೆಯಿಂದ ಅನಗತ್ಯವಾಗಿ ಸಾರಿಗೆ ನೌಕರ ಸಿಬ್ಬಂದಿ ರಜೆ ಹಾಕಿದರೆ ವೇತನ ನೀಡಲ್ಲ ಅಂತ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.
ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವರಿಗೆ ಈ ಸುತ್ತೋಲೆ ಅನ್ವಯ ಆಗಲಿದ್ದು, ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.