ನೈಜೀರಿಯಾ: ನೈಜೀರಿಯಾದಲ್ಲಿ ಉಗ್ರರು ಸೆರೆಮನೆ ಮೇಲೆ ದಾಳಿ ಮಾಡಿದ್ದಾರೆ. ಓವೇರಿ ಸೆರೆಮನೆಯ ಮೇಲೆ ದೇಳಿ ಮಾಡಿದ ಉಗ್ರರು 1800 ಖೈದಿಗಳನ್ನು ಬಂಧಮುಕ್ತಗೊಳಿಸಿದ ಘಟನೆ ನಡೆದಿದೆ.
ಈ ವೇಳೆ ಪೊಲೀಸರು ಮತ್ತು ಉಗ್ರರ ನಡುವೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸಡರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಲ್ಲದೇ ಜೈಲಿನ ಕಟ್ಟಡ ಭಾಗಶಃ ಕಟ್ಟಡ ಜಖಂಗೊಂಡಿದೆ. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ 40ಕ್ಕೂ ಅಧಿಕ ಖೈದಿಗಳು ಭಾಗಿಯಾಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪರಾರಿಯಾಗಿರುವ ಖೈದಿಗಳನ್ನು ಮತ್ತೆ ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಸೆರೆಮನೆಯ ಮೂಲಗಳು ಹೇಳಿವೆ.
ಈ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ. ಈಸ್ಟರ್ನ್ ಸೆಕ್ಯೂರಿಟಿ ನೆಟ್ವರ್ಕ್ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.