ಪೈಲೆಟ್ ಆಗುವ ಕನಸು ಕಾಣುತ್ತಿದ್ದ ಬಾಲಕನಿಗೆ ವಿಮಾನದೊಳಗಿನ ಕಾಕ್ ಪಿಟ್ ಗೆ ಕರೆದೊಯ್ದುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಾಲಕನ ಕನಸು ನನಸು ಮಾಡಿದ್ದಾರೆ.
ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಬಾಲಕನೊಬ್ಬನ ಜೊತೆ ಸಂವಾದ ನಡೆಸಿದ್ದು, ಆತನಿಗೆ ಪೈಲೆಟ್ ಆಗುವ ಕನಸು ಹೊತ್ತಿದ್ದಾನೆ ಎಂದು ತಿಳಿಯಿತು. ಆದರೆ ಮಾರನೇ ದಿನ ದಿಢೀರನೆ ವಿಮಾನದೊಳಗೆ ಪೈಲೆಟ್ ಕೂರುವ ಕಾಕ್ ಪಿಟ್ ಗೆ ನೇರವಾಗಿ ಕರೆದೊಯ್ದು ಅಚ್ಚರಿ ಮೂಡಿಸಿದರು.
ರಾಹುಲ್ ಗಾಂಧಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ಯಾವುದೇ ಕನಸು ಅಸಾಧ್ಯವೆನಿಸುವಷ್ಟು ದೊಡ್ಡದಲ್ಲ. ಅದ್ವೈತ್ ಎಂಬ ಬಾಲಕನ ಕನಸು ನನಸು ಮಾಡುವತ್ತ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಎಲ್ಲರಿಗೂ `ಹಾರುವ’ ಅವಕಾಶಗಳನ್ನು ಸೃಷ್ಟಿ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಕೇರಳದ ಕಣ್ಣೂರು ಜಿಲ್ಲೆಗೆ 2 ದಿನಗಳ ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಅದ್ವೈತ್ ಎಂಬ ಬಾಲಕನ ಜೊತೆ ಮಾತನಾಡುವಾಗ ನೀನು ಮುಂದೆ ಏನಾಗಬೇಕು ಅಂತ ಇದ್ದಿಯಾ? ನಿನ್ನ ಕನಸುಗಳೇನು ಎಂದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವನ ಆಸೆ ತಿಳಿದುಕೊಂಡರು. ಮಾರನೇ ದಿನವೇ ಆ ಬಾಲಕನ ಆಸೆ ಈಡೇರಿಸಿದರು.