ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಗಗನಕುಸುಮವಾಗುತ್ತಿದೆ ಈ ನಡುವೆ ಇದೀಗ ಬೇಳೆಕಾಳುಗಳ ಪೂರೈಕೆ ಕೊರತೆಯಿಂದಾಗಿ ರಾಜ್ಯದ ಜನರ ಜೇಬು ಸುಡುವಂತೆ ಭಾಸವಾಗುತ್ತದೆ. ಜನವರಿಯಲ್ಲಿ ಪ್ರತಿ ಕಿಲೋಗೆ 95 ರೂ. ನಿಂದ 99 ರೂ.ವರೆಗೆ ಮಾರಾಟವಾಗುತ್ತಿದ್ದ ಶಿವಲಿಂಗ ತೊಗರಿ ಬೇಳೆ ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗಿನ ಅವಧಿಯಲ್ಲಿ 3 ಬಾರಿ ಬೆಲೆ ಏರಿಕೆ ಕಂಡಿದ್ದು, ಈಗ ಬೆಂಗಳೂರು ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ 181 ರೂ.ಗೆ ಬಂದು ನಿಂತಿದೆ.
ಚಿಯಾದ ಸಾಂಬಾರು ಸಿದ್ಧತೆಗೆ ಅಗ್ರಪಂಕ್ತಿಯಲ್ಲಿರುವ ತೊಗರಿ ಬೇಳೆ ಹಾಗೂ ಇತರ ಬೇಳೆಕಾಳುಗಳನ್ನು ಪಿತೃಪಕ್ಷ, ನವರಾತ್ರಿ ಹಾಗೂ ದೀಪಾವಳಿಗೆ ಜನರು ಹೆಚ್ಚಾಗಿ ಖರೀದಿಸುವುದು ವಾಡಿಕೆ. ಆದರೆ, ಈ ಬಾರಿ ಬೇಳೆ ಖರೀದಿಗೆ ಹೋದ ಜನರಿಗೆ ಬೆಲೆ ಹೆಚ್ಚಳದ ಬಿಸಿ ಜೋರಾಗಿಯೇ ತಟ್ಟತೊಡಗಿದೆ.
ಕೋವಿಡ್ ಸಮಯದಲ್ಲಿ ಕಾರಣವಿಲ್ಲದೇ ವರ್ತಕರು ನಾನಾ ನೆಪಹೇಳಿ ಬೇಳೆ ಬೆಲೆಯನ್ನು 10 ರಿಂದ 20 ರೂ ಏರಿಸಿದ್ದರು. ಅದೇ ರೀತಿ ಈಗ ತೊಗರಿ ಬೇಳೆ ಜೊತೆಗೆ ಉದ್ದು, ಹೆಸರು, ಕಡಲೆ ಬೇಳೆಗಳ ಜೊತೆಗೆ ಹಲಸಂದೆ, ಬಟಾಣಿ, ಹುರುಳಿಕಾಳ ಬೆಲೆಯೂ ಶೇ. 20 ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವಾರದಿಂದ ಬೆಳೆಗಳ ಬೆಲೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ.
- ಜನವರಿ 95-99 ರೂ.
- ಜೂನ್ 100-115
- ಆಗಸ್ಟ್ 145-165
- ಸೆಪ್ಟೆಂಬರ್ 175-185