ಮುಂಬಯಿ: ಪಿಕೆಎಲ್ 10ನೇ ಆವೃತ್ತಿಗೆ ನಡೆದ ಆಟಗಾರರ ಹರಾಜಿನಲ್ಲಿ ಭಾರತದ ಸ್ಟಾರ್ ರೇಡರ್ ಪವನ್ ಕುಮಾರ್ ಸೆಹ್ರಾವತ್, ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮತ್ತೊಮ್ಮೆ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪವನ್ ಕುಮಾರ್ ಅವರನ್ನು ತಮಿಳು ತಲೈವಾಸ್ ತಂಡ 2.26 ಕೋಟಿ ರೂ.ಗಳಿಗೆ ಖರೀದಿಸಿತ್ತು,ಆದರೆ, ಈ ಬಾರಿ ತೆಲುಗು ಟೈಟನ್ಸ್ 2.60 ಕೋಟಿ ರೂಪಾಯಿಗೆ ಪವನ್ ಅವರನ್ನು ಖರೀದಿಸುವುದರೊಂದಿಗೆ ಹರಿಯಾಣದ ರೇಡರ್ ಈ ದಾಖಲೆಗೆ ಪಾತ್ರರಾಗಿದ್ದಾರೆ.