ಬೆಂಗಳೂರು: ಬಿಎಂಟಿಸಿಯಲ್ಲಿ ಮತ್ತೊಂದು ಮಹಾ ಕರ್ಮಕಾಂಡ ಬಯಲಿಗೆ ಬಂದಿದೆ. ಕಂಡಕ್ಟರ್ಸ್ ಕಳ್ಳಾಟ ವಿಡಿಯೋ ಸಮೇತ ರಾಜ್ ನ್ಯೂಸ್ ಬಯಲು ಮಾಡ್ತಿದೆ .
ಶಕ್ತಿ ಯೋಜನೆಯಿಂದ ಬಿಎಂಟಿಸಿ ನೌಕರರು ತಿಂದು ತೇಗುತ್ತಿರೋದು ಎಷ್ಟೆಷ್ಟು..? ಗೊತ್ತಾ? ಸರ್ಕಾರದ ಖಜಾನೆ ಬರಿದು ಮಾಡುತ್ತಿದ್ಯಾ ಶಕ್ತಿ ಸ್ಕೀಂ.? ಬಿಎಂಟಿಸಿ ಕಂಡಕ್ಟರ್ಸ್ ಗಳು ಶಕ್ತಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ್ರಾ ಎಂಬ ಪ್ರಶ್ನೆ ಕಾಡುತ್ತದೆ. ಕಂಡಕ್ಟರ್ಸ್ ಕಳ್ಳಾಟದಿಂದ ಶಕ್ತಿ ಯೋಜನೆಗೆ ಕಪ್ಪುಚುಕ್ಕೆ ತರಲಿದ್ದಾರೆ. ದಿನದ ಭತ್ಯೆ ಪಡೆಯಲು ಬಿಎಂಟಿಸಿ ಕಂಡಕ್ಟರ್ಸ್ ಮಾಡ್ತಿದ್ದಾರೆ ದ್ರೋಹ.?
ಮಹಿಳೆಯರಿಗೆ ಟಿಕೆಟ್ ನೀಡದ ಬಿಎಂಟಿಸಿ ನಿರ್ವಾಹಕರಿಂದ ಕಳ್ಳಾಟ ಶುರುವಾಗಿದೆ. ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಆದ್ರೆ ಮಹಿಳೆಯರಿಗೆ ಟಿಕೆಟ್ ನೀಡ್ತಿಲ್ಲ ಬಿಎಂಟಿಸಿ ನಿರ್ವಾಹಕರು. ಟಿಕೆಟ್ ನೀಡದೆ ಬಿಎಂಟಿಸಿ ಕಂಡಕ್ಟರ್ ಗಳು ಬೇಕಾಬಿಟ್ಟಿ ಹರಿದುಹಾಕುತ್ತಿದ್ದಾರೆ. ಬಸ್ ಗಳಲ್ಲಿ ಬಿಎಂಟಿಸಿ ನಿರ್ವಾಹಕರು ಟಿಕೆಟ್ ಹರಿದುಹಾಕುತ್ತಿದ್ದಾರೆ. ಇದನ್ನ ವಿಡಿಯೋ ಸಮೇತ ರಾಜ್ ನ್ಯೂಸ್ ನಿರ್ವಾಹಕರ ವಂಚನೆ ಬಟಾಬಯಲು ಮಾಡಿದೆ.