ಬೆಂಗಳೂರು: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿ ಹಿನ್ನೆಲೆಯಲ್ಲಿ ಇಂದು ಎಸ್ಕಾಂ ಎಂ.ಡಿಗಳ ಜೊತೆ ಇಂಧನ ಸಚಿವ ಕೆ ಜೆ ಜಾರ್ಜ್ ತುರ್ತು ಸಭೆ ನಡೆಸಿದ್ದಾರೆ.
ಸಂಜೆ 4 ಗಂಟೆಗೆ ಬೆಂಗಳೂರಿನ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದೆ.ಎಲ್ಲಾ ಎಸ್ಕಾಂ ಎಂ.ಡಿ ಗಳ ಜೊತೆ ವಿದ್ಯುತ್ ಕೊರತೆ ಬಗ್ಗೆ ಸಭೆ ನಡೆಸಲಿದ್ದಾರೆ.
ಯಾವೆಲ್ಲಾ ಎಸ್ಕಾಂ ವ್ಯಾಪ್ತಿಯಲ್ಲಿ ಎಷ್ಟೆಷ್ಟು ವಿದ್ಯುತ್ ಕೊರತೆ ಇದೆ ಎಂದು ಮಾಹಿತಿ ಪಡೆಯಲಿದ್ದಾರೆ. ಎಷ್ಟೆಷ್ಟು ವಿದ್ಯುತ್ ಬೇಡಿಕೆ ಇದೆ ಎನ್ನುವುದರ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಿದ್ದಾರೆ. ಸಭೆಯಲ್ಲಿ ಬೆಸ್ಕಾಂ ಚೆಸ್ಕಾಂ,ಮೆಸ್ಕಾಂ,ಹೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಕಂಪನಿಗಳ ಎಂಡಿಗಳು ಭಾಗಿಯಾಗಲಿದ್ದಾರೆ.