ಬೆಂಗಳೂರು: ಜೆಪಿ ನಗರದಲ್ಲಿ ನಡೆದ ಭೀಕರ ಅವಳಿ ಕೊಲೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದ್ದು, ಒರಿಸ್ಸಾ ಮೂಲದ ತಾಯಿ-ಮಗ ಮೃತ ದುರ್ದೈವಿಗಳಾಗಿದ್ದಾರೆ. ಮಮತಾ ಬಸು ಮತ್ತು ದೆವಬ್ರತಾ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು.
ಬೈಕ್ ಮೇಲೆ ಬಂದ ದುಷ್ಕರ್ಮಿಯೊಬ್ಬ ಕೊಲೆ ಮಾಡಿ ಬಳಿಕ ಮನೆಯಲ್ಲಿದ್ದ ಲ್ಯಾಪ್ಟಾಪ್, ಮೊಬೈಲ್, ಚಿನ್ನಾಭರಣ ಸೇರಿದಂತೆ ನಗದನ್ನು ಹೊತ್ತೊಯ್ದಿದ್ದಾನೆ. ಮನೆಯಲ್ಲಿ ಮಮತಾ ಬಸು ಏಕಾಂಗಿಯಾಗಿ ವಾಸಿಸುತ್ತಿದ್ದರು. 25 ದಿನಗಳ ಹಿಂದೆ ವೃದ್ಧೆಯ ಮಗನ ಸ್ನೇಹಿತ ಒಡಿಸಾ ಮೂಲದ ದೇವರಥ್ ಬೆಹೇರಾ ಅವರು ನಗರಕ್ಕೆ ಬಂದಿದ್ದು, ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು.
ಮನೆಯ ಸುತ್ತಮುತ್ತಲ ರಸ್ತೆಯಲ್ಲಿರುವ ಸಿಸಿ ಟಿವಿಗಳ ಫುಟೇಜ್ಗಳನ್ನು ಪಡೆದುಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿವೆ.