ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಾಗಿ ತನ್ನ ಮೊದಲ ಪರೀಕ್ಷಾ ವಾಹನದ ಉಡಾವಣೆಯನ್ನು ಮರು ನಿಗದಿಪಡಿಸಿದೆ.
ಟೆಸ್ಟ್ ವೆಹಿಕಲ್ ಲಿಫ್ಟ್ ಆಫ್ ಇಂದು ನಡೆಯಲಿಲ್ಲ, ತಾಂತ್ರಿಕ ಸಮಸ್ಯೆಯಿಂದ ಗಗನಯಾನ ಪರೀಕ್ಷಾ ಉಡಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು.
ಟೆಸ್ಟ್ ವೆಹಿಕಲ್ ಮಿಷನ್ ಗಗನಯಾನ ಕಾರ್ಯಕ್ರಮದ ಪೂರ್ವವರ್ತಿಯಾಗಿದ್ದು, ಮೂರು ದಿನಗಳ ಕಾಲ 400 ಕಿ.ಮೀ ದೂರದ ಭೂಮಿಯ ಕೆಳ ಕಕ್ಷೆಯಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಗುರಿಯನ್ನು ಹೊಂದಿದೆ.