ಬೆಂಗಳೂರು : ರಾಜ್ಯ ರಾಜಕೀಯದಲ್ಲಿಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸವಾಲು, ಪ್ರತಿ ಸವಾಲು ಶುರುವಾಗಿದಲ್ಲದೇ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಡಿಕೆ ಶಿವಕುಮಾರ್ ಹಾಕಿರುವ ಸವಾಲನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸ್ವೀಕರಿಸಿದಲ್ಲದೇ ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ (ಅಕ್ಟೋಬರ್ 26) ಸುದ್ದಿಗೋಷ್ಟಿಯನ್ನು ಕರೆದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಜಯದಶಮಿಯ ಆಸುಪಾಸಿನಲ್ಲಿ ಹಬ್ಬದ ಆಚರಣೆ ಜೊತೆಗೆ ಸಿಎಂ ಹಾಗೂ ಡಿಸಿಎಂ ವೈಯುಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಅದಕ್ಕೆ ಸಂಬಂಧಪಟ್ಟ ಎರಡು ಮೂರು ವಿಚಾರಗಳಿಗೆ ಡಿಸಿಎಂ ನನಗೆ ಸವಾಲು ಹಾಕಿದ್ದಾರೆ. ಅದಕ್ಕೆ ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಸ್ವೀಕಾರ ಮಾಡುತ್ತೇನೆ. ಪಲಾಯನ ಮಾಡಲ್ಲ. ನನ್ನ ಹತ್ತಿರ ಸಹ ಸರಕು ಇದೆ. ಇವತ್ತಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಕಾರಣ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಸ್ವಾಗತ ಮಾಡುತ್ತೇನೆ. ಅವರು ಕೊಟ್ಟಂತಹ ತೀರ್ಮಾನಗಳ ಆದಾರದ ಮೇಲೆ ಬಿಜೆಪಿ ಸರ್ಕಾರ ನಡೆದಿದೆ ಎಂದಿದ್ದಾರೆ.