ಬೆಂಗಳೂರು: ಬೆಂಗಳೂರಿನಲ್ಲಿ ಇಂದು(ಅಕ್ಟೋಬರ್ 26) ಸುದ್ದಿಗೋಷ್ಟಿಯಲ್ಲಿ ಡಿಸಿಎಂ ಡಿಕೆಶಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಬೆನ್ನಲ್ಲೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.
ನಾನೇನ್ ಮಾಡಿದ್ಧೇನೆ ಅವರೇನ್ ಮಾಡಿದ್ದಾರೆ ಎಲ್ಲವನ್ನು ಬಿಚ್ಚಿ ಮಾತನಾಡೋಣ ಚರ್ಚೆಗೆ ಟೈಂ ಫಿಕ್ಸ್ ಮಾಡಿ ನಾನು ಸಿದ್ದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ಡಿಕೆ ಶಿವಕುಮಾರ್ ಅವರು ಕೊಟ್ಟ ಬಹಿರಂಗ ಆಹ್ವಾನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಚರ್ಚೆಗೆ ಅಸೆಂಬ್ಲಿಯಲ್ಲಾದರು ಸರಿ ಅಥವಾ ಯಾವ ಚಾನಲ್ನಲ್ಲಾದರೂ ಸರಿ ಟೈಂ ಫಿಕ್ಸ್ ಮಾಡಿ ನಾನು ಮಾತನಾಡುತ್ತೇನೆ . ನವೆಂಬರ್ ಒಂದನೇ ತಾರೀಕಿನ ಬಳಿಕ ನಾನು ಚರ್ಚೆಗೆ ಸಿದ್ದ, ನಾನೇನು ಮಾಡಿದ್ದೇನೆ ಅವರೇನು ಮಾಡಿದ್ದಾರೆ ಎನ್ನುವುದನ್ನು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡಿ, ಹಿಟ್ ಅಂಡ್ ರನ್ ಮಾಡೋದಲ್ಲ. ಸಮಯ ನಿಗಧಿ ಮಾಡಿ ನಾನು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.