Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಲಘು ಅಪಘಾತ

ಮೈಸೂರು : ಚಾಮುಂಡಿ ಬೆಟ್ಟದ ರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಜಖಂಗೊಂಡಿದೆ. ಸದ್ಯ ವಾಹನ ಚಾಲಕ ಮತ್ತು ಕಾರಿನಲ್ಲಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

ಸ್ಥಳದಲ್ಲಿ ಅಪಘಾತದಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಚಾಮುಂಡಿ ಬೆಟ್ಟದ ಪೊಲೀಸರು ಕೂಡಲೇ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ

ಸದ್ಯ ಗಾಡಿ ಗುದ್ದಿದ ರಭಸಕ್ಕೆ ಕಾರು ಮಾತ್ರ ಜಖಂ ಆಗಿದ್ದು ಯಾರಿಗೂ ತೊಂದರೆ ಆಗಿಲ್ಲ. ಘಟನೆ ನಡೆದ ಸ್ಥಳದಲ್ಲಿ ಚಾಮುಂಡಿ ಬೆಟ್ಟಕ್ಕೆ ದರ್ಶನಕ್ಕೆ ಬಂದ ಭಕ್ತಾಧಿಗಳ ಬೇರೆ ವಾಹನಗಳು ಕೂಡ ಸ್ತಬ್ಧವಾಗಿ ನಿಂತಿದ್ದು ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಆಗಿದೆ.

ಸದ್ಯ ಅಪಘಾತಗೊಂಡವರನ್ನು ಪಕ್ಕದಲ್ಲಿ ನಿಲ್ಲಿಸಿ ಬೇರೆ ವಾಹನಗಳಿಗೆ ಸಂಚಾರ ಮಾಡಲು ಅನು ಮಾಡಿಕೊಡಲಾಗಿದೆ. ಅಪಘಾತಕ್ಕೊಳಗಾದ ಕಾರಿನ ಕುಳಿತಿದ್ದ ಎಲ್ಲರನ್ನು ಬೇರೊಂದು ಕಾರಿನಲ್ಲಿ ಕಳುಹಿಸಿ ಆಸ್ಪತ್ರೆಗೆ ಸೇರಿಸುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!