ಬಾಗಲಕೋಟೆ: ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಈಗಾಗಲೇ ಸಿಎಂ ಇದ್ದರೆ . ಹಾಗಾಗಿ ಈ ಹೇಳಿಕೆ ನೀಡಿದ್ದಾರೆ. ಈಗ ಸಿಎಂ ಇದಾರೆ, ಮತ್ತೆ ಬೇರೆಯವ್ರು ಸಿಎಂ ಆಗ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.ಶಾಸಕಾಂಗ ಪಕ್ಷದ ನಾಯಕರಾಗಿ ಸಿಎಂ ಆಗಿದ್ದಾರೆ. ಅವರು ಹೋಗುವವರೆಗೂ ಅವರೇ ಸಿಎಂ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ನಾಯಿ-ನರಿಗಳಂತೆ ಕಚ್ಚಾಡ್ತಾರೆ, ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಂಕಣವಾಡಿಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ತಮ್ಮ ಪಕ್ಷದಲ್ಲಿನದ್ದು ಗಮನಿಸಿ ನಮ್ಮ ಬಗ್ಗೆ ಹೇಳಲಿ. ಪಾಪ ವಿಪಕ್ಷದ ನಾಯಕನನ್ನು ಆಯ್ಕೆ ಮಾಡೋಕೆ ಆಗ್ತಿಲ್ಲ. ಅಲ್ಲೆಷ್ಟು ಕಚ್ಚಾಟ ಇರಬೇಕು ಲೆಕ್ಕ ಹಾಕಿ. ಬಿಜೆಪಿ ರಾಜ್ಯಾಧ್ಯಕ್ಷನ ತೆಗೆಯಬೇಕಂತಿದಾರೆ ಅದೂ ಆಗ್ತಿಲ್ಲ. ಯಡಿಯೂರಪ್ಪ ಅವ್ರನ್ನ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಗರು ಬಿಎಸ್ ವೈ ಅವ್ರನ್ನ ಮೂಲೆಗುಂಪು ಮಾಡಿದ್ದಾರೆ. ಏನಾದ್ರು ಮಾತಾಡಿ ಮೇಲೆ ಬರಬೇಕಂತಿದಾರೆ, ಮಾತನಾಡಲಿ. ಅವರ ವಯಸ್ಸಿನಲ್ಲಿ ಹೀಗೆ ಮಾತನಾಡಬಾರದು ಎಂದರು.
ಡಿಕೆಶಿ ಸಿಎಂ ಆಗಲ್ಲ ಎಂಬ ಬಿಎಸ್ ವೈ ಹೇಳಿಕೆ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಅವ್ರನ್ನ ಜೈಲಿಗೆ ಕಳುಹಿಸಿದವ್ರು ಯಾರು? ಸಿಎಂ ಸ್ಥಾನದಿಂದ ಕೆಳಗಿಳಿಸಿದವ್ರು ಯಾರು?ಈ ಪಾಪದ ಬಗ್ಗೆ ಯಡಿಯೂರಪ್ಪ ಹೇಳಲಿ ಎಂದು ಹೇಳಿದ್ದಾರೆ.