ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಕಳೆದ ಹಿಂದೆ ಕಾರು ಚಾಲಕನಾಗಿದ್ದ ಕಿರಣ್ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪ್ರತಿಮಾ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ವಿಚಾರಣೆ ನಡೆಸುವಾಗ ಬಾಯಿಬಿಟ್ಟಿದ್ದಾನೆ.
4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಆತನ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದನು. ಆದರೆ ಪ್ರತಿಮಾ ಅವರು ಕಿರಣ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಮೇಲೆ ದ್ವೇಷಿಸುತ್ತಿದ್ದನು.
ಇನ್ನು ಪ್ರತಿಮಾ ರೇಡ್ ಹೋಗುವ ವಿಚಾರ ಲೀಕ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಈ ಕಾರಣಕ್ಕೆ ಪ್ರತಿಮಾ ವಾರ್ನ್ ಕೂಡ ಮಾಡಿದ್ದರು. ಈ ವೇಳೆ ಬೈದಾಗ ತಪ್ಪಾಗಿದೆ ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡಿದ್ದನು.
ಕೊಲೆ ದಿನವೂ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದನು. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಶನಿವಾರ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಕೊಲೆ ಮಾಡಿ ಕಿರಣ್ ಎಸ್ಕೇಪ್ ಆಗಿದ್ದನು.