ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲ ತಯಾರಿ ಆಗಬೇಕಿದೆ.ಬಿಜೆಪಿ ಬಹಳ ತಯಾರಿ ನಡೆಸಬೇಕಿದೆ.ಬಿಜೆಪಿ ಹೆಚ್ಚಿನ ಸೀಟು ಬರಬೇಕಿದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಬಿಜೆಪಿಗೆ ಬಹಳ ದೊಡ್ಡ ಶಕ್ತಿ.ಉತ್ತರ ಕರ್ನಾಟಕಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು.ಅದಕ್ಕೆ ವರಿಷ್ಠರು ಸಭೆ ಕರೆದಿದ್ದಾರೆ.ಅವರ ಬಳಿ ಹೇಳ್ತೀವಿ.ನಮಗೆ ಗೊತ್ತಿರುವ ಪ್ರಕಾರ ಆಯ್ಕೆ ಆಗಿಲ್ಲ ಎಂದರು.
ಇನ್ನು ಅಭಿಪ್ರಾಯ ಪಡೆಯಲು ಆಗಮಿಸಿದ್ದಾರೆ.ನಾವು ಕೂಡ ನಮ್ಮ ಅಭಿಪ್ರಾಯ ಹೇಳ್ತೀವಿ.ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ ಕೇಳಲಿದ್ದೇವೆ.ಉ.ಕ ಭಾಗದಲ್ಲಿ ಯಾರಾಗಬೇಕು ಅಂತ ವರಿಷ್ಠರು ತೀರ್ಮಾನ ಮಾಡಲಿ ಎಂದರು.