ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪುತ್ರನ ಮೇಲೆ ಆರೋಪಗಳು ಕೇಳಿ ಬರುತ್ತಿವೆ..ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿದಿನವು ಯತೀಂದ್ರ ಸಿದ್ದರಾಮಯ್ಯ ವಿರುದ್ದ ಬಾಣ ಬಿಡ್ತಾಯಿದ್ದಾರೆ..ಇದರಿಂದ ಕೋಪ ಗೊಂಡ ಸಿಎಂ ಸಿದ್ದರಾಮಯ್ಯ ಇಂದು ಕುಮಾರಸ್ವಾಮಿ ವಿರುದ್ಧ ಗುಡಿಗಿದ್ದಾರೆ..ಹಾಗಾದ್ರೆ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಹಾಗೂ ಅವರ ಪುತ್ರ ಯತೀಂದ್ರ ಏನು ಹೇಳಿದ್ರು ಅನ್ನೋದರ ಮಾಹಿತಿ ಇಲ್ಲಿದೆ.
ಗ್ಯಾರಂಟಿ ಸರ್ಕಾರ ಬಂದ ಮೊದಲ ತಿಂಗಳಿನಲ್ಲಿಯೇ ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಷ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆ ತುಣುಕು ಪೆನ್ ಡ್ರೈವ್ ನಲ್ಲಿದೆ ಎಂದು ವಿಧಾನಸಭೆ ಕಲಾಪದಲ್ಲಿಯೇ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ರು..ಆ ವೇಳೆ ದೊಡ್ಡ ಹೈಡ್ರಾಮಾ ಸೃಷ್ಟಿ ಆಗಿತ್ತು..ಪೆನ್ ಡ್ರೈವ್ ಬಗ್ಗೆ ಎಲ್ಲರಲ್ಲಿಯೂ ಕೂತುಹಲ ಮೂಡಿತ್ತು.. ಆ ಕುತೂಹಲ ಇನ್ನೂ ಕೂಡಾ ಹಾಗೇ ಉಳಿದಿದೆ….
ಹೌದು ಅಂದು ಪೆನ್ ಡ್ರೈವ್ ಬಿಡುಗಡೆಗೊಳಿಸುತ್ತೇನೆ ಎಂದಿದ್ದ ಕುಮಾರಸ್ವಾಮಿ ಬಿಡುಗಡೆಗೊಳಿಸಲಿಲ್ಲಾ..ಇದಕ್ಕೆ ಕೈ ನಾಯಕರು ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡ್ತಾರೆ ಎಂದು ಲೇವಡಿ ಮಾಡಿದ್ರು…ಆದರೆ ಇದೀಗ ಮುಂದು ವರೆದು ಅಡಿಯೋ ಬಿಡುಗಡೆ ಗೊಳಿಸಿ ವರ್ಗಾವಣೆ ದಂಧೆಗೆ ಇದಕ್ಕಿಂತ ಪೂರಾವೆ ಬೇಕಾ ಎಂದು ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೇ ಮಾಡಿದ್ದಾರೆ…
ಕುಮಾರಸ್ವಾಮಿ ಆರೋಪಕ್ಕೆ ತಿರಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿಯವರು ಎಂದಿಗೂ ತಾವು ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಿಲ್ಲ. ದ್ವೇಷ ಹಾಗೂ ಅಸೂಯೆಯ ರಾಜಕಾರಣ ಮಾಡುತ್ತಿದ್ದಾರೆ. 38 ಸ್ಥಾನದಲ್ಲಿದ್ದ ಜೆಡಿಎಸ್ ನವರು ಈಗ 19 ಸ್ಥಾನಕ್ಕೆ ಇಳಿದಿದ್ದಾರೆ. ಅವರು ಮಾಡುವ ಸುಳ್ಳು ಆರೋಪಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು….
ಇನ್ನೂ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಖಾರವಾಗಿಯೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಅವತ್ತು ಮಾತನಾಡಿದ್ದು CSR ಫಂಡ್ ವಿಚಾರದ ಲಿಸ್ಟ್ ಬಗ್ಗೆ. ಆದರೆ ಅದನ್ನು ವರ್ಗಾವಣೆ ಎಂದು ಹೇಳುತ್ತಿದ್ದಾರೆ. ಇವರ ಅವಧಿಯಲ್ಲಿ ಲಿಸ್ಟ್ ಎಂದರೇ ವರ್ಗಾವಣೆ ದಂಧೆಯಾಗುತ್ತಾ? ಪತ್ನಿ, ಮಗ ಸೇರಿ ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ಅದೇ ರೀತಿ ಮಾತನಾಡಲು ಆಗುತ್ತಾ? ಹಾಗಾದ್ರೆ ಅವರ ಅವಧಿಯಲ್ಲಿ ಮಾಡಿದಂತ ವರ್ಗಾವಣೆ ಎಲ್ಲ ದಂಧೆನಾ. ಹಣ ಪಡೆಯದೆ ವರ್ಗಾವಣೆ ಮಾಡಿದ್ದಾರಾ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹೆಸರನ್ನು ಹೇಳದೇ ಪರೋಕ್ಷವಾಗಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ರು….
ಒಟ್ಟಾರೆ ಸಿಎಂ ಪುತ್ರನ ಮೇಲೆ ಹಲವು ಆರೋಪಗಳನ್ನ ಮಾಜಿ ಸಿಎಂ ಕುಮಾರಸ್ವಾಮಿ ಮಾಡ್ತಾಯಿದಾರೆ..ಈ ನಡೆ ಸಿಎಂ ಸಿದ್ದರಾಮಯ್ಯ ಗೆ ಆತಂಕ ಶುರುಮಾಡಿವೆ. ಈಂತಹ ಬೆಳವಣಿಗೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಡ್ಯಾಮೇಜ್ ಆಗ್ತಾಯಿದೆ ಎಂದು ಡಿಕೆ ಬಣದ ನಾಯಕರು ಪಕ್ಷದ ಒಳೊಗೆ ಆಡಿಕೊಳ್ಳುತ್ತಿದ್ದಾರೆ..ಇದನ್ನ ಹೈಕಮಾಂಡ್ ನಾಯಕರ ಮಟ್ಟಕ್ಕೂ ಮುಟ್ಟಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ..ಈ ಹಿನ್ನಲೆ ಇಂದು ಯತೀಂದ್ರ ಕಡೆಯಿಂದಲೇ ಸಿಎಂ ಆರೋಪಗಳ ಕುರಿತು ಸ್ಪಷ್ಟನೆ ನೀಡಿಸಿದ್ದಾರೆ ಎಂದು ಹೇಳಲಾಗುತ್ತಿದೆ..ಈ ಆರೋಪಗಳು ಮುಂದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದುನೊಡಬೇಕಿದೆ…
ವರದಿ : ಬಸವರಾಜ ಹೂಗಾರ