ಬೆಂಗಳೂರು: ನಗರದಲ್ಲಿರುವ ಪಿಜಿಗಳಿಗೆ ಬಿಬಿಎಂಪಿ ಶಾಕ್ ನೀಡಿದ್ದಾರೆ. ನಗರದಲ್ಲಿ ಪಿಜಿಗಳಿರುವ ಅಕ್ಕ- ಪಕ್ಕದವರಿಂದ ಪಾಲಿಕೆಗೆ ದೂರುಗಳು ಬರುತ್ತಿವೆ. ಹೀಗಾಗಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ನಂತರ ಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾರ್ಗಸೂಚಿ ಹೊರಡಿಸಲಾಗುವುದು ತಿಳಿಸಿದ್ದರು.
ಮಾನವಸಂಪನ್ಮೂಲಗಳಿಗೆ ಅನುಗುಣವಾಗುವಂತ ರೀತಿಯಲ್ಲಿ ಪಿಜಿಯನ್ನ ನಿರ್ವಾಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರನ್ನು ಹಾಕಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಬಂದಿವೆ.
ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಗೈಡ್ ಲೈನ್ ರಿಲೀಸ್ ಮಾಡಲು ನಿರ್ಧಾರ ಕೈಗೊಂಡಿದ್ದು, ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.