ಬೀಜಿಂಗ್: ಸಾಮಾನ್ಯವಾಗಿ ಮನುಷ್ಯರು ಓಡಿಸುವ ಗಾಡಿಗಳಿಗೆ ರಸ್ತೆಗಳಲ್ಲಿ ಸಿಗ್ನಲ್ ಲೈಟ್ಗಳನ್ನು ಹಾಕಿರುತ್ತಾರೆ. ಪಾದಚಾರಿಗಳಿಗೆ ಅನುಕೂಲವಾಗುವ ಉದ್ದೇಶವೂ ಇದರ ಹಿಂದಿರುತ್ತದೆ. ಆದರೆ ನೀವೆಂದಾದರೂ ಒಂಟೆಗಳಿಗಾಗಿ ಟ್ರಾಫಿಕ್ ಸಿಗ್ನಲ್ ಇದೆ ಎಂಬುದರ ಬಗ್ಗೆ ಕೇಳಿದ್ದೀರಾ? ಇದು ಕೇಳಲು ಕೊಂಚ ವಿಚಿತ್ರವೆನಿಸಿದರೂ ಸತ್ಯ. ಒಂಟೆಗಳಿಗಾಗಿ ಟ್ರಾಫಿಕ್ ಸಿಗ್ನಲ್ ನಿರ್ಮಿಸಿದ ಈ ದೇಶ ಸದ್ಯ ಸುದ್ದಿಯಲ್ಲಿದೆ.
ಚೀನಾದಲ್ಲಿ ಒಂಟೆಗಳಿಗಾಗಿ ವಿಶ್ವದ ಪ್ರಥಮ ಟ್ರಾಫಿಕ್ ಸಿಗ್ನಲ್ ಸ್ಥಾಪಿಸಲಾಗಿದೆ. ಉತ್ತರ ಚೀನಾದ ಗನ್ಸು ಪ್ರಾಂತದ ಡನ್ ಹುವಾಂಗ್ ಬಳಿ ಒಂಟೆಗಳಿಗಾಗಿ ಸಿಗ್ನಲ್ನ್ನು ಸ್ಥಾಪಿಸಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ವಿಶೇಷವಾಗಿ ವಿನ್ಯಾಸ ಮಾಡಲಾದ ಈ ಟ್ರಾಫಿಕ್ ಲೈಟ್ಸ್ಗಳು ಸದ್ಯ ಭಾರೀ ಚರ್ಚೆಯಲ್ಲಿವೆ. ಈ ಪ್ರದೇಶದಲ್ಲಿ ಒಂಟೆ ಸವಾರಿ ಪ್ರವಾಸಿಗರ ಪ್ರಮುಖ ಆಕರ್ಷಣೆ.
ಮಿಂಗ್ ಶಾ ಪರ್ವತ ಮತ್ತು ಕ್ರೆಸೆಂಟ್ ಸ್ಟ್ರಿಂಗ್ನಲ್ಲಿ ಒಂಟೆಗಳ ಘರ್ಷಣೆಯನ್ನು ತಡೆಯುವುದಕ್ಕೆ ಈ ಸಿಗ್ನಲ್ ಸಹಾಯಕವಾಗಿವೆ ಎನ್ನಲಾಗಿದೆ. ಸಾಮಾನ್ಯ ಟ್ರಾಫಿಕ್ ಸಿಗ್ನಲ್ನಂತೆಯೇ ಒಂಟೆಗಳಿಗಾಗಿ ನಿರ್ಮಿಸಿದ ಸಿಗ್ನಲ್ ರಸ್ತೆ ದಾಟುವಾಗ ಹಸಿರು ಬಣ್ಣಕ್ಕೆ ತಿರುಗುತ್ತವೆ. ಒಂಟೆಗಳು ನಿಲ್ಲಲು ಕೆಂಪು ಬಣ್ಣಕ್ಕೆ ಟ್ರಾಫಿಕ್ ಲೈಟ್ ತಿರುಗುತ್ತದೆ.