ಯುಗಾದಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಲು ಆಗದೇ ಇದ್ದಿದ್ದಕ್ಕೆ ನೊಂದ ಬಿಎಂಟಿಸಿ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಹಳ್ಳಿಯ ಡಿಪೋ 33ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗದಗ ಜಿಲ್ಲೆಯ ನಿಡಗುಂದಿ ನಿವಾಸಿ ಟಿಪ್ಪು ಸುಲ್ತಾನ್ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
6ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರಕಾರ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡಿಲ್ಲ.
ಆರ್ಥಿಕ ಸಂಕಷ್ಟದಲ್ಲಿ ಟಿಪ್ಪು ಕುಟುಂಬಕ್ಕೆ ಮಾರ್ಚ್ ತಿಂಗಳ ವೇತನ ಬಿಡುಗಡೆ ಆಗದೇ ಇದ್ದಿದ್ದರಿಂದ ಮಕ್ಕಳಿಗೆ ಬಟ್ಟೆ ಕೊಡಿಸಲು ಆಗಿರಲಿಲ್ಲ. ಇದರಿಂದ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿದ್ದು, ನೊಂದ ಟಿಪ್ಪುಸುಲ್ತಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.