ಕೊಪ್ಪಳ : ಮುನಿರಾಬಾದ್ ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನ ಲಕ್ಷಾಂತರ ಭಕ್ತಸಾಗಾರವೇ ಹರಿದುಬರುತ್ತಿದೆ. ಆದರೂ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನದಂದು ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಆಗಮಿಸುತ್ತಾರೆ. ಇದರಿಂದಾಗಿ ತಿಂಗಳಿಗೆ ಕೋಟಿಗೂ ಅಧಿಕ ದೇಣಿಗೆಯ ಸಂಗ್ರಹವಾಗುತ್ತಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಯಾವುದೇ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
ವಿಶೇಷ ದಿನವಾದ ಶುಕ್ರವಾರ ಮತ್ತು ಮಂಗಳವಾರ ಹಾಗೂ ಹುಣ್ಣಿಮೆಯ ದಿನದಂದು ಬರುವ ಭಕ್ತರು ಮಾತ್ರ ರಾತ್ರಿ ಹೊತ್ತು ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಒಂದು ಕಿಲೋಮೀಟರ್ ನಷ್ಟು ಮಲಗುತ್ತಿರುವುದನ್ನು ನೋಡಿದರೆ ದೇವಸ್ಥಾನದ ಅಭಿವೃದ್ಧಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಭಕ್ತರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ ಎನ್ನುತ್ತಾರೆ ಭಕ್ತರು,ಇಲ್ಲಿ ಸೂಕ್ತ ಶೌಚಾಲಯಗಳ ಸೌಲಭ್ಯಗಳು ಇಲ್ಲ. ಇದರಿಂದಾಗಿ ರಾತ್ರಿಯಾದರೆ ಸಾಕು ಎಲ್ಲೆಂದರಲ್ಲಿ ಮೂಲ-ಮೂತ್ರ ವಿಸರ್ಜನೆ ಮಾಡುತ್ತಾರೆ ಭಕ್ತರು. ಇದರಿಂದ ದೇವಸ್ಥಾನ ಸುತ್ತಮುತ್ತ ಗಬ್ಬುನಾರುತ್ತಿರುವ ಅನೈರ್ಮಲ್ಯತೆ ಎದ್ದು ಕಾಣುತ್ತಿದೆ. ಇದರಿಂದ ಸಾಂಕ್ರಿಮಿಕ ರೋಗಗಳು ಹರಡುವುದು ಸಾಮಾನ್ಯವಾಗಿದೆ.
ಗ್ರಾಹಕರಿಗೆ ಹಲವು ಅಂಗಡಿಗಳಲ್ಲಿ ಅತ್ಯಧಿಕ ಬೆಲೆ ಏರಿಕೆ ಕಡಿಮೆ ಮಾಡಲು ದತ್ತಿ ಇಲಾಖೆಯಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಪೂಜಾ ವಸ್ತುಗಳ ಸಾಮಗ್ರಿ ಮಾರಾಟ ಮಳಿಗೆ ಪ್ರಾರಂಭಿಸಿದ್ದೇವೆ. ಅದನ್ನು ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಿ ಹಾಗೂ ಹೆಚ್ಚಿನ ಮೂಲಭೂತ ಶೌಕರ್ಯಗಳಾದ ಶೌಚಾಲಯ ನಿರ್ಮಾಣ ಮಾಡಲು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ, ಹಾಗೂ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ,ಎಲ್ಲೆಂದರಲ್ಲಿ ಮಲವಿಸರ್ಜನೆ, ಆಹಾರ, ಊಟ ಮಾಡಿದ ವಸ್ತುಗಳನ್ನು ಇಲ್ಲೇ ಬಿಸಾಡಿ ಹೋಗುತ್ತಿರುವದರಿಂದ ಸ್ವಚ್ಛತೆ ಕಾಪಾಡಲು ಎಷ್ಟು ಸಿಬ್ಬಂದಿಗಳ ನೇಮಕ ಮಾಡಿದರು ಸಾಲದು ಬರುವ ಜನರು ಸ್ವಯಂ ಸ್ವಚ್ಛತೆ ಅಳವಡಿಸಿಕೊಳ್ಳಲು ಮನವಿ ಮಾಡಿದರು.
ವರದಿ : ಎಸ್. ಎಂ. ಹಿರೇಮಠ ಕೊಪ್ಪಳ