ಸಚಿವರಿಗೆ ಸ್ವಲ್ಪ ಅಹಃ ಜಾಸ್ತಿ ಆಗಿದೆ. ಅದರಿಂದ ಇವೆಲ್ಲವೂ ನಡೆಯುತ್ತಿರುತ್ತದೆ ಎಂದು ಮಧುಬಂಗಾರಪ್ಪ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಮನಸ್ತಾಪ ಶಮನವಾಯಿತಾ ಎಂಬ ವಿಚಾರವಾಗಿ ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು ಸಚಿವರಿಗೆ ಸ್ವಲ್ಪ ಅಹಃ ಜಾಸ್ತಿ ಆಗಿದೆ.ಅದರಿಂದ ಇವೆಲ್ಲವೂ ನಡೆಯುತ್ತಿರುತ್ತದೆ. ಸಚಿವರು ತಾಳ್ಮೆಯಿಂದ ಕ್ಷೇತ್ರದ ಶಾಸಕರನ್ನ ಕರೆದುಕೊಂಡು ಹೋಗಬೇಕು. ಅಹಃ ಜಾಸ್ತಿ ಆದಾಗ ಏನು ಮಾಡೋಕೆ ಆಗಲ್ಲ. ಅಧಿಕಾರ ಬಂದ ಸಂದರ್ಭದಲ್ಲಿ ಪಿತ್ತ ನೆತ್ತಿಗೆರಿದಾಗ ಇವೆಲ್ಲವೂ ಆಗುತ್ತೆ. ಬೇರೆ ಸಚಿವರು ನೋಡಿ ಎಷ್ಟು ಚನ್ನಾಗಿ ಮಾತಾಡ್ತಾರೆ.
ಜನರ ಜೊತೆಗೆ ಹೇಗೆ ಇರ್ತಾರೆ ಅಂತ ನೋಡಿ ಕಲಿಯಬೇಕು. ಜಿಲ್ಲೆಯಲ್ಲಿ ಎರಡು ಭಾಗ ಆಗಿದೆ. ಅದನ್ನು ಸರಿಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಏನ್ ಮಾಡಬೇಕು ಅಂತ ನೋಡಬೇಕು. ನಮಗೂ ಜವಾಬ್ದಾರಿ ಇದೆ, ಅವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ನಮ ಪಕ್ಷದಲ್ಲೇ ಇದ್ದು ಹುಳುಕು ಮಾಡೋದಲ್ಲ. ಯಡಿಯೂರಪ್ಪ ಮಕ್ಕಳನ್ನು ಸೋಲಿಸಬೇಕು ಎಂದು ನಮಗೂ ಇದೆ ಎಂದು ಮಧುಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವರದಿ : ಬಸವರಾಜ ಹೂಗಾರ