ಬೆಂಗಳೂರು : ಇಂದು ಗಲ್ಲಿ ಗಲ್ಲಿಯಲ್ಲು ಬಡವರ ಬಾದಾಮಿಯ ಗಮ್ಮತ್ತು ಜೋರಾಗಿತ್ತು. ಇಂದಿನಿಂದ ಮೂರು ದಿನಗಳ ವರೆಗೆ ಕಡ್ಲೆಕಾಯಿಯದ್ದೇ ಸದ್ದು ಇರಲಿದೆ. ಮೊದಲ ದಿನವಾದ ಇಂದು ಸಿಲಿಕಾನ್ ಸಿಟಿಯ ಜನ್ರು ಕಡ್ಲೇಕಾಯಿಯನ್ನ ತಿನ್ನೋದ್ರಲ್ಲಿ ಬ್ಯುಸಿ ಆಗಿದ್ರೆ.. ಇತ್ತ ಜಾತ್ರೆಯ ಸೊಬಗನ್ನ ಒಂದು ರೌ೦ಡ್ ಹಾಕೊಂಡು ಸಕತ್ ಮಜಾ ಮಾಡಿದ್ರು.
ಅತ್ತ ನೋಡಿದ್ರು ಕಡಲೇಕಾಯಿ.. ಇತ್ತ ನೋಡಿದ್ರು ಕಡಲೇಕಾಯಿ.. ಕಣ್ಣು ಹಾಯಿಸಿದಲೆಲ್ಲಾ ಕಣ್ಣಿಗೆ ಕಾಣೋದೇ ಈ ಕಡಲೇಕಾಯಿ.. ಒಂದ್ಕಡೆ ಕಡ್ಲೆಕಾಯಿ ತಿನ್ನೋದ್ರಲ್ಲಿ ಸಿಟಿ ಜನ ಬ್ಯುಸಿ ಯಾಗಿದ್ರೆ.. ಇನ್ನೊಂದ್ಕಡೆ ಕಡ್ಲೆಕಾಯಿಯಿಂದ ಅಲಂಕಾರ ಗೊಂಡ ನಂದಿ ಜೊತೆ ಸೇಲ್ಫಿ ಕ್ಲಿಕ್ಕಿಸೋದ್ರಲ್ಲಿ ಮುಗಿಬಿದ್ದಿದ್ರೂ.. ವರ್ಷಕ್ಕೊಮ್ಮೆ ನಡೆಯೋ ಕಡಲೇಕಾಯಿ ಪರಿಷೆಗೆ ಇಂದು ಅದ್ದೂರಿ ಚಾಲನೆ ಸಿಕ್ಕಾಯ್ತು. ಕಡಲೆ ಕಾಯಿ ಪರಿಷೆ ಅಂದ್ರೆ ಸಿಲಿಕಾನ್ ಸಿಟಿ ಜನ್ರಿಗೆ ಹಬ್ಬವೇ ಮನೆ ಮಾಡಿತ್ತು.
ಹೌದು ಎಲ್ಲಿ ಕಣ್ಣು ಹಾಯಿಸಿದ್ರೂ ವಿವಿಧ ಬಗೆಯ ಕಡಲೇಕಾಯಿಗಳದ್ದೇ ಗಮ್ಮತ್ತು, ಹಾಗೇ ಎಲ್ಲೆಲ್ಲೂ ಜಾತ್ರೆಯ ವಾತಾವರಣ. ಇತಿಹಾಸ ಪ್ರಸಿದ್ದ ಕಡಲೇಕಾಯಿ ಪರಿಷೆಗೆ ಶಾಸಕ ಮುನಿರತ್ನ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ಅವರಿಂದ ಚಾಲನೆ ಸಿಕ್ತು. ಕಳೆದ 7 ವರ್ಷಗಳಿಂದ ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ನೇತೃತ್ವದಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಯೆಸ್, ಕಾರ್ತಿಕ ಮಾಸದಲ್ಲಿ ಪ್ರತಿವರ್ಷದಂತೆ 3 ದಿನಗಳ ಕಾಲ ಪರಿಷೆ ನಡೆಯಲಿದೆ. ಇನ್ನು ಈ ಪರಿಷೆಯಲ್ಲಿ 800 ಕೆಜಿ ಕಡಲೆ ಕಾಯಿಗಳಿಂದ ಶೃಂಗರಿಸಿದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ಸೇಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು.
ಇನ್ನು ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದ್ದು, ಪ್ರತಿನಿತ್ಯ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಮಾಡಲಾಗುತ್ತೆ. ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ರೈತರು ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ 200 ಮಳಿಗೆಗಳಲ್ಲಿ ರೈತರು ಬೆಳದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸರಿಸುಮಾರು 8ಲಕ್ಷ ಜನರು ಪರಿಷೆಯಲ್ಲಿ ಭಾಗಿ ಸಾಧ್ಯತೆ ಇದೆ. ಇನ್ನು ಮೊದಲ ದಿನವಾದ ಇಂದು ಪರಿಷೆಯಲ್ಲಿ ಸಾವಿರಾರು ಜನ್ರು ಬರ್ತಿದ್ರು, ತಮ್ಮ ಕುಟುಂಬ ಫ್ರೆಡ್ಟ್ ಜೊತೆ ಜಾತ್ರೆಗೆ ಬಂದು ಕಡೆಲೇಕಾಯಿ, ತಿಂಡಿ ತಿನಿಸುಗಳು ಹಾಗೂ ತಮಗೆ ಬೇಕಾದ ವಸ್ತು ಆಟಿಕೆಗಳನ್ನ ಖರೀದಿಸಿ ದೇವರ ದರ್ಶನ ಪಡೆದು ಪರಿಷೆಯಲ್ಲಿ ಸಖತ್ ಎಂಜಾಯ್ ಮಾಡಿದ್ರು.
ವಿಶೇಷವಾಗಿ ಈ ಮಲ್ಲೇಶ್ವರ ಕಡಲೆಕಾಯಿ ಪರಿಷೆಯು ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಬೇಕೆಂಬ ಉದ್ದೇಶದಿಂದ ಮನೆಯಿಂದ ಕೈಚೀಲ ತನ್ನಿ ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಸುಮಾರು ೪೦೦ ಕ್ಕೂ ಹೆಚ್ಚು ಸಂಪಿಗೆ ಮರಗಳನ್ನು ನೆಡಲು ಮೆರವಣಿಗೆ ಮೂಲಕ ಜಾಗೃತಿ ಮೂಡಿಸಲಾಯ್ತು.
ಒಟ್ನಲ್ಲಿ ಮೂರೂ ದಿನಗಳ ಕಾಲ ನಡೆಯೋ ಈ ಪರಿಷೆಗೆ ಮೊದಲ ದಿನವೇ ಜನ್ರಿಂದ ಉತ್ತಮ ರೆಸ್ಪಾನ್ಸ್ ಬರ್ತಿದ್ದು, ಜನ್ರು ಕೂಡ ಈ ಜಾತ್ರೆಯನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ.
ವರದಿ : ಹರ್ಷಿತಾ ಪಾಟೀಲ್