ಯಾದಗಿರಿ : ಟಂಟಂ-ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಬಳಿ ಘಟನೆ ನಡೆದಿದೆ.
ಮೃತಪಟ್ಟರನ್ನು ಅಯ್ಯಮ್ಮ (60) ಶರಣಮ್ಮ (40) ಕಾಸೀಂಬೀ (40) ಭೀಮಬಾಯಿ (40) ದೇವಿಂದ್ರಮ್ಮ (70) ಎಂದು ಗುರುತಿಸಲಾಗಿದೆ. ಮುನಮುಟಗಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ದೇವದುರ್ಗದ ಕಡೆ ಟಂಟಂನಲ್ಲಿ ಕಾರ್ಮಿಕರು ತೆರಳುತ್ತಿ ವೇಳೆ ಅಪಘಾತ ಸಂಭವಿಸಿದೆ.
ಮೃತರು ವಡಗೇರಿ ತಾಲೂಕಿನ ಮನಮುಟಗಿ ಗ್ರಾಮದವರು ಎನ್ನಲಾಗಿದ್ದು, ಟಂಟಂನಲ್ಲಿದ್ದ ಐವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.