ಹೊಸಕೋಟೆ : ಹನುಮ ಜಯಂತಿಯಲ್ಲಿ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿ ಅಸ್ವಸ್ಥರಾಗಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ನಗರದ ದೇವಾಲಯಗಳಾದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಪುಲಿಯೊಗರೆ, ಪಾಯಸ, ಲಡ್ಡು ಪ್ರಸಾದ ಸೇವನೆ ಮಾಡಿದ್ದ ಜನರು ವಾಂತಿ ಭೇದಿಯಾಗಿ ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಯನ್ನು ಸೇರಿದ್ದಾರೆ.
ಪುಡ್ ಪಾಯಿಸಾನ್ನಿಂದ ಒಬ್ಬ ವೃದ್ಧೆ ಮೃತಪಟ್ಟಿದ್ದಾಳೆ. ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸ್ವಸ್ತಗೊಂಡ ಭಕ್ತರಿಗೆ ಚಿಕಿತ್ಸೆ ನೀಡಲಾಗಿದೆ.