ಬೆಂಗಳೂರು : ಕಾನೂನು ಕೈಗೆತ್ತಿಕೊಳ್ಳದೇ ಫಲಕಗಳನ್ನು ಬದಲಾಯಿಸಿ ಎಂದು ಕನ್ನಡಪರ ಸಂಘಟನೆಗಳಿಗೆ ಕಾಂಗ್ರೆಸ್ ಪಕ್ಷದ ಹಿರಿಯನಾಯಕ ಬಿ ಕೆ ಹರಿಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಕನ್ನಡ ಬೋರ್ಡ್ ಕಡ್ಡಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕನ್ನಡದಲ್ಲಿ ಫಲಕ ಇರಬೇಕು ಎಂಬುದು ಸತ್ಯವೇ.
ಕಾನೂನು ಕೈಗೆತ್ತಿಕೊಳ್ಳದೇ ಫಲಕಗಳನ್ನು ಬದಲಾಯಿಸಿ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಕನ್ನಡ ಹೋರಾಟಗಾರರ ಮೇಲೆ ನಮ್ಮ ಮೇಲೂ ಬಹಳಷ್ಟು ಕೇಸ್ ಗಳೂ ಬಾಕಿ ಇವೆ. ನೆಲ ಜಲ ಭಾಷೆಯ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ನಾನೂ ಕೂಡ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇನ್ನೂ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಇದೇ ಮೊದಲಲ್ಲ ಹೇಳಿರೋದು. ಸಂಸ್ಕೃತದಲ್ಲಿ ಬಹಳ ದೊಡ್ಡ ಭಾಷಣ ಬಿಗಿತಾರೆ. ಕೋಮುದ್ವೇಷ ಹರಡುವುದಕ್ಕೆ ಕಲ್ಲಡ್ಕ ಪ್ರಯತ್ನ ಮಾಡ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ವನ್ನು ಕದಡುವ ಕೆಲಸ ಮಾಡ್ತಿದೆ. ಬಿಜೆಪಿ ಸೂತ್ರಧಾರರ ಮನಸ್ಥಿತಿ ಈ ದೇಶದ ಮಹಿಳೆಯರ ವಿರುದ್ದವಾಗಿದೆ. ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಾಗಬೇಕಿತ್ತು.
ಸಮುದಾಯದವರೆಲ್ಲ ಕಂಪ್ಲೆಂಟ್ ಕೊಟ್ಟಮೇಲೆ ಎಫ್ಐಆರ್ ಆಗಿದೆ. ತಕ್ಷಣವೇ ಸರ್ಕಾರ ಕಲ್ಲಡ್ಕ ರನ್ನು ಬಂಧಿಸಬೇಕು. ಬಹಳ ಪ್ರಚೋದನಕಾರಿ ಎರಡು ಕೋಮಿನ ನಡುವೆ ದ್ವೇಷ ಬೆಳೆಸುವಂತ ಹೇಳಿಕೆ ಇದು. ಒದ್ದು ಒಳಗೆ ಹಾಕಿ ಎನ್ನೋ ಭಾಷೆ ನಾವು ಉಪಯೋಗಿಸಲು ಆಗುವುದಿಲ್ಲ. ಆದರೆ ಕಾನೂನು ತಮಗೆ ಲೆಕ್ಕವೇ ಇಲ್ಲ ಎಂಬಂತೆ ಮಾತನಾಡಿದ್ದಾರೆ ಕಲ್ಲಡ್ಕ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ವರದಿ : ಬಸವರಾಜ ಹೂಗಾರ