ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಸಿಎಂ ರಾಜಕೀಯ ಸಲಹೆಗಾರರಾದ ಬಿ ಆರ್ ಪಾಟೀಲ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಮಾತನಾಡಿದ ಅವರು ಡಿಸಿಎಂಗೆ ಹೊಸ ವರ್ಷದ ಶುಭಾಶಯ ತಿಳಿಸಲು ಬಂದಿದ್ದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಬೇಕು. ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಜಯ ಸಾಧಿಸಲಿ ಅಂತ ಹಾರೈಸಿದೆ. ಸಿಎಂ ಸಲಹೆಗಾರನಾಗಿ ನನಗೆ ತೃಪ್ತಿ ಇದೆ.
ನಾನು ಸಾಮಾನ್ಯ ಕಾರ್ಯಕರ್ತ. ಯಾವುದೇ ಸ್ಥಾನ ಮಾನ ಕೇಳಿಲ್ಲ ಎಂದು ಹೇಳಿದರು. ಇನ್ನೂ ಸಿಎಂ ರಾಜಕೀಯ ಗಂಜಿಕೇಂದ್ರ ಓಪನ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ಕುಮಾರಸ್ವಾಮಿ ತಮ್ಮ ಕಾಲದಲ್ಲಿ ಕೆಲಸಕ್ಕೆ ಬಾರದವರಿಗೆ ಹುದ್ದೆ ಕೊಟ್ಟಿದ್ರು. ಬೇಕ ಬೇಕಾದವರಿಗೆ ಗೂಟದ ಕಾರ್ ಕೊಟ್ಟಿದ್ರು. ಕುಮಾರಸ್ವಾಮಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕುಮಾರಸ್ವಾಮಿ ಆರೋಪಕ್ಕೆ ಬಿ ಆರ್ ಪಾಟೀಲ್ ತಿರುಗೇಟು ನೀಡಿದರು.
ವರದಿ : ಬಸವರಾಜ ಹೂಗಾರ