ಬೆಂಗಳೂರು : ಹುಬ್ಬಳ್ಳಿಯಲ್ಲಿನ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರನ್ನಯ ಬಂಧಿಸಿ ಇಂದು ರಾಜ್ಯಾಧ್ಯಂತ ಬಿಜೆಪಿ ಪ್ರತಿಭಟನೆ ನಡೆಸಲು ಮಂದಾಗಿದೆ.ಪ್ರತಿಭಟನೆ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇಶಕ್ಕೆ, ರಾಜ್ಯಕ್ಕೆ ಅಗೌರವ,ಅಶಾಂತಿ ಉಂಟುಮಾಡಿದ್ದಾರೆ.ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ . ಪಾಪ ಲೋಕಸಭೆ ಚುನಾವಣೆ ಹತ್ರ ಬರ್ತಾ ಇದೆ. ಏಳು ತಿಂಗಳು ವಿರೋಧ ಪಕ್ಷದ ನಾಯಕನನ್ನ ಮಾಡಿಲ್ಲ. ಈಗ ಪಾಪ ನಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ ಮಾಡ್ತಾ ಇದ್ದಾರೆ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಇದಕ್ಕೆ ಉತ್ತರ ಕೊಡ್ತಾರೆ. ನಾವು ಅದಕ್ಕೆ ಉತ್ತರ ಕೊಡ್ತೀವಿ. ಅಧಿಕಾರನ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತ ಮೇಲೆ ಕೇಸ್ ಹಾಕಿಲ್ವ. ಹುಬ್ಬಳ್ಳಿಯಲ್ಲಿ ಬೆಂಗಳೂರಿನಲ್ಲಿ ಎಷ್ಟು ಕೇಸ್ ಕಾಂಗ್ರೆಸ್ ಕಾರ್ಯಕರ್ತ ಮೇಲೆ ಹಾಕಿದ್ದಾರೆ. ಅಮಾಯಕ ಮೇಲೆ ಕೇಸ್ ಹಾಕಿದ್ದಾರೆ. ನಾವು ಯಾರ ಮೇಲೆ ಹಿಂದೇನೂ ಹಾಕಿಲ್ಲ,ಮುಂದೇನು ಕೇಸ್ ಹಾಕಿಲ್ಲ ಎಂದರು.
ಆರ್.ಅಶೋಕ ಪೊಲೀಸ್ ಠಾಣೆಗೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿ ಹೋಗಿ ಕಟ್ಟಿ ಹಾಕಿಕೊಳ್ಳಲಿ. ಅಶೋಕ ಗೃಹ ಸಚಿವರು ಆಗಿದ್ದಾಗ ಏನು ಮಾಡಿದ್ರು. ಕೇಸರಿ ಬಟ್ಟೆ ಹಾಕಿಕೊಂಡು ಸ್ಟೇಷನ್ ಗೆ ಹೋಗಿ ಅಧಿಕಾರಿಗಳನ್ನ ನಿಲ್ಲಿಸಿದ್ರು. ಆ ಕೆಲಸ ನಾವು ಮಾಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ