ಚಿಂಚೋಳಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕರವೇ ವತಿಯಿಂದ ಕಡ್ಡಾಯವಾಗಿ ಅಂಗಡಿ ಮುಗ್ಗಟ್ಟುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು ಎಂದು ಚಿಂಚೋಳಿ ಕರವೇ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಕನ್ನಡ ನಾಮಫಲಕ ಬಳಕೆ ಮಾಡುವಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ತಾಲ್ಲೂಕು ಅಧ್ಯಕ್ಷರಾದ ಸಚಿನ ಚವ್ಹಾಣ್ ಮಾತನಾಡಿ ನಗರದಲ್ಲಿರುವ ಎಲ್ಲ ಅಂಗಡಿ-ಮುಂಗಟುಗಳು, ಹೋಟೆಲ್‌ಗಳು, ಕಂಪನಿಗಳು ಮಾನ್ಯ ಮುಖ್ಯಮಂತ್ರಿಗಳ ಸುಗ್ರೀವಾಜ್ಞೆ ಪುಕಾರ ಫೆಬ್ರುವರಿ 28 ಕನ್ನಡದಲ್ಲಿ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿಬೇಕು.
ಪರವಾನಿಗೆ ಪಡೆದ ಎಲ್ಲ ಉದ್ದಿಮೆಗಳು, ಮಳಿಗೆಗಳ ನಾಮಫಲಕಗಳ ಶೇ 60 ರಷ್ಟು ಭಾಗ ಕನ್ನಡದಲ್ಲಿರಬೇಕು. ಸ್ಪಷ್ಟವಾಗಿ ಕಾಣುವಂತೆ ಕನ್ನಡ ಪದಗಳನ್ನು ಬಳಸಬೇಕು.ಈ ನಿಯಮ ಉಲ್ಲಂಘಿಸಿದರೆ, ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಚಿಂಚೋಳಿ ತಾಲೂಕು ವತಿಯಿಂದ ವಿನಂತಿಸಲಾಗಿದೆ ಎಂದು ಹೇಳಿದರು