ಹುಬ್ಬಳ್ಳಿ: ರಾಮಭಕ್ತ ಶ್ರೀಕಾಂತ್ ಪೂಜಾರಿ ಬಿಡುಗಡೆಯಾಗಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ. ನಾವು ಹಿಂದೆಯೇ ಹೇಳಿರುವ ಹಾಗೇ ಏನೇ ಕಾನೂನು ಹೋರಾಟ ಇದ್ದರೂ ನಾವು ಬದ್ಧ ಎಂದು ಹೇಳಿದ್ದೇವು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ವಕೀಲರು ಉತ್ತಮ ಕೆಲಸ ಮಾಡಿ ಬಿಡುಗಡೆ ಮಾಡಿಸುವ ಕಾರ್ಯವನ್ನು ಮಾಡಿದ್ದಾರೆ. ನ್ಯಾಯಾಲಯಕ್ಕೆ ಹಾಗೂ ವಕೀಲರಿಗೆ ಅಭಿನಂದನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಶ್ರೀಕಾಂತ್ ಪೂಜಾರಿ ಬಿಡುಗಡೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕದೆ. ರಾಜ್ಯ ಸರ್ಕಾರ ಎಷ್ಟೇ ಸಮಸ್ಯೆ ತಂದೊಡ್ಡಿದರೂ ಕೂಡ ನಮ್ಮ ಹೋರಾಟಕ್ಕೆ ಜಯಸಿಕ್ಕಿದೆ. ಈ ನಿಟ್ಟಿನಲ್ಲಿ ನಮಗೆ ಸಂತೋಷವಾಗಿದೆ ಎಂದರು.
ರಾಜ್ಯದ ಜನರ ಮನಸ್ಸಿನಲ್ಲಿ ಕೋಮುವಾದದ ಜೊತೆಗೆ ಅಶಾಂತಿಯನ್ನು ಹುಟ್ಟು ಹಾಕಿ ಶ್ರೀಕಾಂತ್ ಪೂಜಾರಿ ಕ್ರಿಮಿನಲ್ ಎಂದು ಬಿಂಬಿಸಿದ್ದ ಸಿಎಂ ಸಿದ್ಧರಾಮಯ್ಯನವರು ಹಾಗೂ ಗೃಹ ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.