ಹೊಸಕೋಟೆ : ಹೊಸಕೋಟೆ ತಾಲೂಕಿನ ಬೈಲು ನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲು ನರಸಾಪುರ ಗ್ರಾಮದಲ್ಲಿ ಬಲಕೇರ ಮದ್ರಾಸ್ ಶಾಲೆಯಲ್ಲಿ ಬಾಲಕಿಯರ ಮದ್ರಾಸ್ ಶಾಲೆಯಲ್ಲಿ ಬಾಲಕಿಯರ ಹಾಗೂ ಮಹಿಳೆಯರ ಕ್ರೀಡಾಕೂಟಕ್ಕೆ ಮಾಜಿ ಪೊಲೀಸ್ ಹಿರಿಯ ಅಧಿಕಾರಿ G A ಬಾವ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಪತ್ನಿ ಶ್ರೀಮತಿ ಪ್ರತಿಭಾ ಶರತ್ ಬಚ್ಚೇಗೌಡ ಚಾಲನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಮಾಜಿ ಅಧಿಕಾರಿ G A ಬಾವ ಈ ಶಾಲೆಯಲ್ಲಿ
ಕ್ರೀಡಾ ದಿನಾಚರಣೆ ತುಂಬಾ ಹೆಮ್ಮೆಯ ವಿಷಯ ಹಾಗೂ ಕ್ರೀಡಾಕೂಟದಲ್ಲಿ ಪೋಷಕರು ಹಾಗೂ ಮಕ್ಕಳು ಇಬ್ಬರು ಪಾಲ್ಗೊಳ್ಳುತ್ತಿರುವುದು ತುಂಬಾ ಒಳ್ಳೆಯ ವಿಷಯವಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಆರೋಗ್ಯ ಕಾಪಾಡಿಕೊಳ್ಳುವುದು ಮಹತ್ವದ ವಿಷಯ ಇದೇ ಬೈಲ್ ನರಸಾಪುರ ಗ್ರಾಮದಲ್ಲಿ ಏಳು ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಬೆರಳೆಣಿಕೆ ಎಷ್ಟು ಮಂದಿ ಮಾತ್ರ ಉತ್ತಮ ವ್ಯಾಸಂಗ ಪಡೆದಿರುವವರು ಇದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಬಾಲಕಿಯರು ಮಾದರಿಯಾಗಬೇಕು ಎಂದು ಗ್ರಾಮಸ್ಥರನ್ನು ಒತ್ತಾಯಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಮಾತನಾಡಿದ ಶಾಸಕರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಶರತ್ ಬಚ್ಚೇಗೌಡ ಬಹುತೇಕ ಬೈಲ ನರಸಾಪುರ ಗ್ರಾಮದಲ್ಲಿ ಅದು 15 ವರ್ಷದ ಬಾಲಕಿಯರಿಂದ ಹಿಡಿದು 65 ವರ್ಷದ
ಮಹಿಳೆಯರವರಿಗೆ ಕ್ರೀಡಾಕೂಟ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ ಮುಸ್ಲಿಂ ಸಮುದಾಯದ ಮಹಿಳೆಯರು ಹಾಗೂ ಬಾಲಕಿಯರು ಕ್ರೀಡಾಕೂಟದಲ್ಲಿ ಭಾಗವಹಿಸುವುದು, ತುಂಬಾ ಸಂತೋಷದ ವಿಷಯ ಹಾಗೂ ಒಳ್ಳೆಯ ವಿಷಯವಾಗಿದೆ. ಹೆಣ್ಣು ಮಕ್ಕಳು ಧೈರ್ಯದಿಂದ ಕ್ರೀಡಾಕೂಟಗಳನ್ನು ಎದುರಿಸಿ ಗೆಲ್ಲಬೇಕು, ಗ್ರಾಮಕ್ಕೆ ಹಾಗೂ ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕೆಂದು ಕ್ರೀಡಾಪಟುಗಳಿಗೆ
ಧೈರ್ಯ ತುಂಬಿ ಶುಭ ಹಾರೈಸಿದರು.
ರಾಮು, ರಾಜ್ ನ್ಯೂಸ್ ಕನ್ನಡ, ಹೊಸಕೋಟೆ