ಬೆಂಗಳೂರು : ಹೆಚ್ಚುವರಿ ಡಿಸಿಎಂ ಮಾಡಿದ್ರೆ ಅನುಕೂಲ ಆಗುತ್ತೆ ಅಂತಾ ಕೆಲವರು ಸಲಹೆ ಕೊಟ್ಟಿದ್ದಾರೆ. ಇದನ್ನು ತಗೆದುಕೊಳ್ಳೊದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr. G. Parameshwara) ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ನಿನ್ನೆ ಬೆಂಗಳೂರಿಗೆ ಬಂದಿದ್ದು ಸಚಿವರ ಜೊತೆ ಸಭೆ ನಡೆಸಿದ್ದಾರೆ.ಈ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಗೃಹ ಸಚಿವರು ಎಲ್ಲ ಮಂತ್ರಿಗಳನ್ನು ಸುರ್ವೆವಾಲಾ ಕರೆದಿದ್ದರು. ನೀವೆಲ್ಲಾ ಹಿರಿಯರಿದ್ದಿರಿ. ಗಂಭೀರವಾಗಿ ಯಾವ ರೀತಿ ಮಾಡಬೇಕು ಅಂತ ಕೇಳಿದ್ರು. ಈ ಸಂದರ್ಭದಲ್ಲಿ ಕೆಲವರು ಸಂಘಟನೆ ಬಲಗೊಳಿಸಲು ಡಿಸಿಎಂ ಒಂದು ಭಾಗ. ಡಿಸಿಎಂ ಮಾಡಿದ್ರೆ ಅನುಕೂಲ ಆಗುತ್ತೆ ಅಂತಾ ಕೆಲವರು ಸಲಹೆ ಕೊಟ್ಟಿದ್ದಾರೆ.
ಇದನ್ನು ತಗೆದುಕೊಳ್ಳೊದು ಹೈಕಮಾಂಡ್ ಗೆ ಬಿಟ್ಟಿದ್ದು. ಸಾಧಕ ಬಾದಕ ನೋಡಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಪಕ್ಷರ ಆಂತರಿಕ ವಿಚಾರ.ಹೈಕಮಾಂಡ್ ಇದೆ ತೀರ್ಮಾನ ಮಾಡುತ್ತೆ. ಈ ಬಗ್ಗೆ ಹೈಕಮಾಂಡ್ ನಲ್ಲಿ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾನು ಎರಡು ಭಾರಿ ಅಧ್ಯಕ್ಷನಾಗಿ ಲೋಕಸಭೆ ಚುನಾವಣೆ ಮಾಡಿದ್ದೆನೆ. ಈ ಬಗ್ಗೆ ಒಂದಿಷ್ಟು ಸಲಹೆ ಕೊಟ್ಟಿದ್ದೆನೆ ಎಂದರು.
ಇನ್ನೂ ಸಚಿವರು ಲೋಕಸಭೆಗೆ ಸ್ಪರ್ಧೆಸೋ ವಿಚಾರವಾಗಿ ಪ್ರತಿಕ್ರಿಯಿಸಿ ಇದು ಚರ್ಚೆಯಾಗಿಲ್ಲ. ಅಕಸ್ಮಾತ್ ಆ ಪರಿಸ್ಥಿತಿ ಬಂದರೆ ನಿಲ್ಲಬೇಕಾಗುತ್ತೆ. ಕಳೆದ ಸಾರಿಯ ಉದಾಹರಣೆ ಕೊಟ್ಟರು. ಕೃಷ್ಣ ಬೈರೇಗೌಡರು ಚುನಾವಣೆಗೆ ಸ್ಪರ್ದಿಸಿದ್ದನ್ನ ಹೇಳಿದ್ರು ಎಂದರು.
ದೆಹಲಿಯಲ್ಲಿ ಸಚಿವರ ಸಭೆ ವಿಚಾರವಾಗಿ ಮಾತನಾಡಿ
ನಾವೆಲ್ಲಾ 11ನೇ ತಾರೀಖು 28 ಜನ ಸಂಯೋಜಕರ ದೆಹಲಿಗೆ ಕರೆದಿದ್ದಾರೆ. ಒಬ್ಬೊಬ್ಬರು ಸಚಿವರನ್ನು 28 ಕ್ಷೇತ್ರದ ಉಸ್ತುವಾರಿಗಳನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಮಾಹಿತಿ ತಗೆದುಕೊಂಡು ಬನ್ನಿ ಅಂದಿದ್ದಾರೆ. ನಮ್ಮ ಜವಾಬ್ದಾರಿ ಏನು ಅಂತ ತಿಳಿಸುತ್ತಾರೆ. ನಮ್ಮ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ತಿಳಿಸುತ್ತೆವೆ.
ಪಿಸಿಸಿಯಿಂದಲೂ ಹೆಸರು ಹೋಗುತ್ತದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಪೈನಲ್ ಮಾಡುತ್ತೆ. ಆದಷ್ಟು ಬೇಗ ಅಭ್ಯರ್ಥಿಗಳ ಮೊದಲ ಲಿಸ್ಟ್ ಬಿಡುಗಡೆ ಮಾಡಿ ಅಂತ ಹೇಳಿದ್ದೆವೆ. ಬೇಗ ಮಾಡಿದ್ರೆ ಅಭ್ಯರ್ಥಿಗಳ ಓಡಾಡ್ತಾರೆ. ನಾವು ಓಡಾಡಿಸ್ತಿವಿ. ಸಭೆ ಸಮಾರಂಭಗಳನ್ನು ಮಾಡಿ ಪ್ರಚಾರ ಶುರು ಮಾಡಬಹುದು ಎಂದ ಹೇಳಿದರು.
ವರದಿ : ಬಸವರಾಜ ಹೂಗಾರ