ಬೆಂಗಳೂರು : ಹಲವು ಜಾತಿಗಳ ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿವೆ. ಈ ಹಿನ್ನಲೆ ಡಿಸಿಎಂ ಮಾಡಬೇಕು ಎಂದು ಹೇಳಿದ್ದೇವೆ ಎಂದು ಸಚಿವ ಸತೀಶ್ ಜಾರಕಿ ಹೊಳಿ (Minister Satish Jarakiholi) ಹೇಳಿದರು.
ಕುಮಾರ ಕೃಪಾದ ಗೃಹ ಕಚೇರಿಯಲ್ಲಿ ಸುರ್ಜೆವಾಲ ಜೊತೆ ಸಭೆ ವಿಚಾರವಾಗಿ ಮಾತನಾಡಿದ ಅವರು ಪ್ರತಿಫಲ ಸಿಗಲಿಕ್ಕೆ ಕಾಲವಕಾಶ ಬೇಕು. ನಾಳೆ ಮೀಟಿಂಗ್ ಇದೆ ಅಲ್ಲಿ ಚರ್ಚೆ ಮಾಡುತ್ತೇವೆ. 11 ತಾರೀಖು ದೆಹಲಿ ಯಲ್ಲಿ ಸಭೆ ಇದೆ. ನಮ್ಮ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿ ತಿಳಿಸಿದ್ದೇವೆ. ನಿನ್ನೆ ಡಿಸಿಎಂಗಳ ವಿಚಾರ ಚರ್ಚೆ ಆಗಿದೆ. ಹಲವು ಜಾತಿಗಳ ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿವೆ. ಈ ಹಿನ್ನಲೆ ಡಿಸಿಎಂ ಮಾಡಬೇಕು ಎಂದು ಹೇಳಿದ್ದೇವೆ. ಹೈಕಮಾಂಡ್ ಏನು ತಿರ್ಮಾನ ಕೈಗೊಳ್ಳುತ್ತಾ ನೋಡೊಣ ಎಂದರು.
ಸಿಎಂ ಆಗುವ ವೇಳೆ ಚರ್ಚೆ ಆಗಿದ್ದು ನಿರ್ಧಾರ ಚರ್ಚೆ ಆಗಿಲ್ಲ. ಅವರದು ವರ್ಶನ್ ಬೇರೆ ನಮ್ಮದು ಬೇರೆ. ಅವರು ಡಿಸಿಎಂ ಆಗಿ ಅವರು ಇದ್ದೆ ಇರುತ್ತಾರೆ. ನಾವು ಹೆಚ್ಚುವರಿ ಡಿಸಿಎಂ ಮಾಡಿ ಎಂದು ಹೇಳಿದ್ದೇವೆ. ನಮ್ಮ ಅಭಿಪ್ರಾಯ ಏನು ಅಂತಾ ಹೇಳಿದ್ದೇವೆ ಮಾಡಬೇಕ ಬೇಡ್ವಾ ಹೈಕಮಾಂಡ್ ನಾಯಕರು ತಿರ್ಮಾನ ಮಾಡಬೇಕು. ಲೋಕಸಭಾ ಚುನಾವಣೆ ಮುಂಚೆ ಡಿಸಿಎಂ ಆಗಬೇಕು. ತಾರ್ಕಿಕ ಅಂತ್ಯ ಆಗಬೇಕು ಎಂದು ಮನವಿ ಮಾಡಿದ್ದೇವೆ. ಅವರು ಏನು ನಿರ್ಧಾರ ಮಾಡ್ತಾರೆ ಎಂದು ನೋಡೋಣ.
ನಮ್ಮದು ಬ್ಲಾಕ್ ಮೇಲ್ ಏನು ಇಲ್ಲಾ ಡಿಮ್ಯಾಂಡ್,ಬೇಡಿಕೆ ಅಂತಾ ಹೇಳಬಹುದು.ಹೆಚ್ಚುವರಿ ಡಿಸಿಎಂ ವಿಚಾರ ಇವತ್ತೆ ಬಂದಿದ್ದು ಅಲ್ಲಾ. ಮೊದಲಿಂದಲೂ ಇತ್ತು ನಮಗೆ ಅವಕಾಶ ಸಿಕ್ಕರಿಲಿಲ್ಲ ಇವಾಗ ಅವಕಾಶ ಸಿಕ್ಕಿದೆ ಈಗಾ ಹೇಳಿದ್ದೇವೆ ಎಂದರು.
ಇನ್ನೂ ನಿಗಮಮಂಡಳಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ ಲೋಕಸಭಾ ಚುನಾವಣೆ ಮುಂಚೆ ನಿಗಮಮಂಡಳಿ ನೇಮಕ ಆಗುತ್ತೆ. ನಿನ್ನೆ ಅದನ್ನು ಚರ್ಚೆ ಮಾಡಿದ್ದೇವೆ. ಎಲೆಕ್ಷನ್ ಮಾಡೋವರು ಕಾರ್ಯಕರ್ತರೇ. ಈ ಹಿನ್ನಲೆ 25 ಜನ ಕಾರ್ಯಕರ್ತರಿಗೂ ಆದ್ರು ನಿಗಮಮಂಡಳಿ ಕೊಡಬೇಕು ಎಂದು ಚರ್ಚೆ ಆಗಿದೆ.
ಸಚಿವರ ಸ್ಫರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ ಗ್ರೌಂಡ್ ನಲ್ಲಿ ಯಾವುದೇ ರೀತಿ ಸಚಿವರ ಸ್ಫರ್ಧೆ ಚರ್ಚೆ ಇಲ್ಲಾ. ಹೊರಗಡೆ ಮಾತ್ರಾ ಹರದಾಡುತ್ತಿದೆ.ಸಚಿವರ ಸ್ಫರ್ಧೆ ಬಗ್ಗೆ ದೆಹಲಿ ಸಭೆಯಲ್ಲಿ ನಿರ್ಧಾರ ಆಗಲಿದೆ. ಅಲ್ಲಿ ಒಂದು ಸ್ಪಷ್ಟತೆ ಸಿಗಲಿದೆ ಎಂದರು.
ವರದಿ : ಬಸವರಾಜ ಹೂಗಾರ