ಕೋಲ್ಕತ್ತಾ : ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ (Music maestro Ustad Rashid Khan)ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇವರು ಕೋಲ್ಕತ್ತಾ ಮೂಲದ ಆಸ್ಪತ್ರೆಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಕಳೆದ ತಿಂಗಳು ಸೆರೆಬ್ರಲ್ ಅಟ್ಯಾಕ್ ಆದ ನಂತರ ಖಾನ್ ಅವರ ಆರೋಗ್ಯವು ಕ್ಷೀಣಿಸಿತು.
ರಾಂಪುರ-ಸಹಸ್ವಾನ್ ಘರಾನಾದ ಖಾನ್ ಆರಂಭದಲ್ಲಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಇದೀಗ ಅವರ ಆರೋಗ್ಯವೂ ಮತ್ತಷ್ಟು ಹದಗೆಟ್ಟಿದ್ದು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.