ಬೆಂಗಳೂರು : ಜನವರಿ 17 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಸಂಬಂಧ ಇಂದು ನಗರದಲ್ಲಿ ಲಾರಿ ಮಾಲೀಕರು ಸಭೆ ನಡೆದಿದ್ದು ಕೇಂದ್ರ ಸರ್ಕಾರ ಕಾಯ್ದೆ ವಿರೋಧಿಸಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ದಕ್ಷಿಣ ಭಾರತ ಲಾರಿ ಮಾಲೀಕರು ಹಾಗೂ ಚಾಲಕರು ಕೇರಳ,ತಮಿಳುನಾಡು,ಮುಂಬಯಿ ,ಮಹಾರಾಷ್ಟ್ರ, ಹೈದರಾಬಾದ್, ಚೆನ್ನೈ ಸೇರಿ ಇತರೆ ರಾಜ್ಯದ ಲಾರಿ ಮಾಲೀಕರು ಭಾಗಿಯಾಗಿದ್ದಾರೆ.
ಲಾರಿ ಮಾಲೀಕರ ಬೇಡಿಕೆಗಳು ಏನು?: ಕೇಂದ್ರ ಸರ್ಕಾರದ ಮುಂದಿರುವ ಬೇಡಿಕೆ..
ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ ಕಲಂ 106ರ ಉಪವಿಧಿ 1 ಮತ್ತು 2 ಅನ್ನು ಕೈ ಬಿಡಬೇಕು
ಕರ್ನಾಟಕ ಸರ್ಕಾರದ ಮುಂದಿರುವ ಬೇಡಿಕೆಗಳು :-
- ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲಾ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕುವುದು
- EXCESS PROJECTION ವಿಧಿಸುತ್ತಿರುವ 20 ಸಾವಿರ ದಂಡವನ್ನು ಕಡಿಮೆಗೊಳಿಸಬೇಕು
- ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ FC ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು
- DSA ಕೇಸುಗಳು ಎಲ್ಲೇ ಇದ್ದರು ಸಹ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳುವ ಅವಕಾಶ ನೀಡಬೇಕು
ಪೋಲೀಸ್ ಇಲಾಖೆಯಲ್ಲಿರುವ ಬೇಡಿಕೆಗಳು :-
- ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶಕ್ಕೆ ದಿನದ ಕೆಲವು ಸಮಯದಲ್ಲಿ ಮಾಡಿರುವ ನಿರ್ಭoಧ ವನ್ನು ಕೈಬಿಡಬೇಕು
- ಅಪಘಾತ ನಡೆದಾಗ ವಾಹನ ಚಾಲಕನ ಚಾಲನಾ ಪತ್ರವನ್ನು ವಶಪಡಿಸಿ ಕೊಳ್ಳುವುದನ್ನು ಬಿಡಬೇಕು
- ಅಪಘಾತ ನಡೆದ ನಂತರ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು
- ಚಾಲಕನ ಚಾಲನಾ ಪರವಾನಿಗೆಯನ್ನು ಅಮಾನತ್ತಿನಲ್ಲಿಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದನ್ನು ನಿಲ್ಲಿಸಬೇಕು
- ಹೊರ ರಾಜ್ಯಗಳ ವಾಹನಗಳು ನಮ್ಮ ರಾಜ್ಯಾದಲ್ಲಿ ಅಪಘಾತಕ್ಕೆ ಈಡಾದಾಗ, ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ ಮತ್ತು ಜಾಮೀನು ಕೇಳುವುದನ್ನು ನಿಲ್ಲಿಸಬೇಕು
- ಬ್ರೇಕ್ ಡೌನ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಬದಿಯಲ್ಲಿ ನಿಂತಿದ್ದರು ವಾಹನಗಳನ್ನು ವಶಪಡಿಸಿಕೊಂಡು ಕಲಂ 283 ರಡಿಯಲ್ಲಿ ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು
- ವಾಹನದ ಡೀಸೆಲ್ ಮತ್ತು ಬಿಡಿ ಭಾಗಗಳು ಕಳ್ಳತನವಾದಾಗ ಮಾಲೀಕರು ಠಾಣೆಗೆ ದೂರು ನೀಡಿದಾಗ FIR ದಾಖಲಿಸಬೇಕು.