ಬೆಂಗಳೂರು : ಇನ್ನೂ ಶ್ರೀರಾಮನ ದೇವಸ್ಥಾನ ಪೂರ್ಣ ಆಗಿಲ್ಲ. ತರಾತುರಿಯಲ್ಲಿ ದೇಗುಲ ನಿರ್ಮಾಣವನ್ನ ಚುನಾವಣೆ ಲಾಭಕ್ಕಾಗಿ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಎಐಸಿಸಿ ನಿರಾಕರಣೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ನಿರ್ಧಾರ ನಿಮಗೆ ಗೊತ್ತಿದೆ. ಎಲ್ಲಾ ಜಾತಿ ಜನರನ್ನ ಕರೆಯಬೇಕಿತ್ತು.ಎಲ್ಲಾ ಜಾತಿ ಜನ ರಾಮನ ಭಕ್ತರಿದ್ದಾರೆ. ಬಿಜೆಪಿಯವರು ರಾಮನ ಹೆಸರು ದುರುಪಯೋಗ ಮಾಡ್ತಿದ್ದಾರೆ. ಇನ್ನೂ ದೇವಸ್ತಾನ ಪೂರ್ಣ ಆಗಿಲ್ಲ. ತರಾತುರಿಯಲ್ಲಿ ದೇಗುಲ ನಿರ್ಮಾಣ ಮಾಡ್ತಿದ್ದಾರೆ.
ಚುನಾವಣೆ ಲಾಭಕ್ಕಾಗಿ ಮಾಡ್ತಿದ್ದಾರೆ ನಾವು ಹಿಂದೂಗಳಲ್ಲ ಅಂತ ಹೇಳಿಲ್ಲ. ರಾಮನ ಪೂಜೆಗೂ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಹಿಂದೂಗಳೇ. ರಾಮನ ಪೂಜೆಯನ್ನೂ ಮಾಡುತ್ತಿಲ್ಲವೇ.. ಯಡಿಯೂರಪ್ಪ ಬೇಕಾದಂತೆ ಮಾಡ್ತಾರೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಬೇಕಾದ್ರೆ ಹೋಗ್ತೇವೆ ಬಿಡ್ತೇವೆ. ಆದರೆ ರಾಮನನನ್ನ ಹೇಗೆ ಬಿಂಬಿಸ್ತಿದ್ದಾರೆ. ವೋಟಿಗಾಗಿ ಅವರು ಮಾಡ್ತಿದ್ದಾರೆ.
ಕಾರ್ಯಕ್ರಮಕ್ಕೆ ಎಲ್ಲರನ್ನ ಕರೆಯಬೇಕು. ಪಕ್ಷದವರೆ ಸೀಮಿತವಾಗಿ ಮಾಡಿದ್ರೆ ಹೇಗೆ. ನಮಗೆ ಇಷ್ಟ ಬಂದಾಗ ನಾವು ಹೋಗ್ತೇವೆ ಎಂದರು ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ಯತ್ನಾಳ್ ನನ್ನನ್ನ ತೀಕ್ಷಣವಾಗಿ ಲೇವಡಿ ಮಾಡಿದ್ದಾರೆ. ಅವರನ್ನ ದಿನಗೂಲಿ ಕಾರ್ಯಕರ್ತನಂತೆ ಕಾಣ್ತಿದ್ದಾರೆ.
ಬಿಜೆಪಿಯಲ್ಲಿ ಯತ್ನಾಳ್ ರಿಜೆಕ್ಟೆಡ್ ಪೀಸ್. ಮಾತನಾಡುವಾಗ ನೋಡಿ ಮಾತನಾಡಬೇಕು. ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದೇ ದುರ್ದೈವ. ನನ್ನನ್ನ ಹಿಂದೂ ವಿರೋಧಿ ಅಂತ ಹೇಳ್ತಾರೆ. ಕೇಂದ್ರದಲ್ಲಿ ಮಂತ್ರಿ ಆಗಿ ಏನೂ ಮಾಡಲಿಲ್ಲ. ರಾಜ್ಯದಲ್ಲಿ ಅವರನ್ನ ಮಂತ್ರಿಯನ್ನಾಗಿಯೇ ಮಾಡಲಿಲ್ಲ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ