ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗಲಿಲ್ಲ ಎಂದು ಸ್ಯಾನಿಸೈಟರ್ ಸೇವಿಸಿ 7 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರ ಯವತ್ಮಾಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ನಡೆದಿದೆ.
ದತ್ತಾ ಲಂಜೆವಾರ್, ನೂತನ್ ಪಥರ್ತ್ಕರ್, ಗಣೇಶ್ ಶೇಲಾರ್, ಸಂತೋಷ್ ಮೆಹರ್, ಸುನಿಲ್ ಧಂಗೆ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತಪಟ್ಟವರೆಲ್ಲರೂ ಕಾರ್ಮಿಕರು ಆಗಿದ್ದು, ಕುಡಿಯಲು ಮದ್ಯ ಸಿಗದ ಕಾರಣ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಂಜಯ್ ಪೂಜಲ್ವಾರ್ ತಿಳಿಸಿದ್ದಾರೆ.