ಕ್ರಿಸ್ ಮೊರಿಸ್ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ 134 ರನ್ ಗಳ ಸಾಧಾರಣ ಗುರಿಯನ್ನು ರಾಜಸ್ಥಾನ್ರಾಯಲ್ಸ್ ಗೆ ಒಡ್ಡಿದೆ.
ಮುಂಬೈನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು.
ಕೆಕೆಆರ್ ಪರ ರಾಹುಲ್ ತ್ರಿಪಾಠಿ 26 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 24 ಎಸೆತಗಳಲ್ಲಿ 4 ಬೌಂಡರಿ ಸೇರಿದ 25 ರನ್ ಗಳಿಸಿದರು. ನಿತಿನ್ ರಾಣಾ 22 ರನ್ ಬಾರಿಸಿ ತಂಡವನ್ನು ಆಧರಿಸಿದರು.
ಕ್ರಿಸ್ ಮೊರಿಸ್ 4 ವಿಕೆಟ್ ಪಡೆದು ಕೆಕೆಆರ್ ಗೆ ಕಡಿವಾಣ ಹಾಕಿದರು. ಜೈದೇವ್ ಉನದ್ಕತ್, ಚೇತನ್ ಸಕರಿಯ ಮತ್ತು ಮುಷ್ಫಫಿಸುರ್ ರೆಹಮಾನ್ ತಲಾ 1 ವಿಕೆಟ್ ಗಳಿಸಿದರು.