ಬಾಗ್ದಾದ : ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡು 70 ಕೊರೊನಾ ರೋಗಿಗಳು ಸೇರಿ ಕನಿಷ್ಠ 82 ಮಂದಿ ಸಾವನ್ನಪ್ಪಿರುವ ಘಟನೆ ಇರಾಕ್ನ ಬಾಗ್ದಾದ್ನಲ್ಲಿ ನಡೆದಿದೆ.
ಇರಾಕ್ ನ ಆಗ್ನೇಯ ಬಾಗ್ದಾದ್ ನ ದಿಯಾಲಾ ಬ್ರಿಡ್ಜ್ ಏರಿಯಾದಲ್ಲಿರುವ ಇಬ್ನ್ ಖತೀಬ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. 82 ಜನ ಸಾವನ್ನಪ್ಪಿದ್ದಾರೆ, 12 ಜನ ರೋಗಿಗಳ ಕೇರ್ ಟೇಕರ್ಗಳು, ವೈದ್ಯರು ನರ್ಸ್ಗಳು ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ 11 ಜನರು ಗಂಭೀರ ಗಾಯಗೊಂಡಿದ್ದು, 110 ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ದುರಂತಗಳು ಮರುಕಳಿಸದಂತೆ ಎಲ್ಲ ಆಸ್ಪತ್ರೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಅಲ್ಲಿನ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.